ಪತಿಯ ಸ್ನೇಹಿತ ನನ್ನ ಜತೆ ಹೀಗೆ ಮಾಡ್ತಿದ್ದಾನೆ! ಏನು ಮಾಡೋದು?

ಸೋಮವಾರ, 5 ಆಗಸ್ಟ್ 2019 (09:09 IST)
ಬೆಂಗಳೂರು: ಗಂಡನ ಆತ್ಮೀಯ ಸ್ನೇಹಿತ ಎನಿಸಿಕೊಂಡ ವ್ಯಕ್ತಿ ಫ್ಲರ್ಟ್ ಮಾಡುತ್ತಿದ್ದರೆ ಒಬ್ಬ ಮಹಿಳೆ ಏನು ಮಾಡಲು ಸಾಧ್ಯ?


ಕೆಲವೊಮ್ಮೆ ಸ್ನೇಹಿತನ ಬಗ್ಗೆ ಹೀಗೆ ಹೇಳಿದರೆ ಗಂಡನೇ ನಂಬದ ಸ್ಥಿತಿಯೂ ಇರಬಹುದು. ಅತ್ತ ಸ್ನೇಹಿತನೊಂದಿಗೆ ನಿಷ್ಠುರವಾಗಿ ನಡೆದುಕೊಳ್ಳಲಾಗದ ಪರಿಸ್ಥಿತಿಯೂ ಇರಬಹುದು.

ಹಾಗಿರುವಾಗ ಆತನಿಗೆ ಅವನದ್ದೇ ದಾಟಿಯಲ್ಲಿ ತಿಳಿಹೇಳುವುದು ಉತ್ತಮ. ಆತನ ಜತೆ ಸಲುಗೆಯಿಂದ ಮಾತನಾಡುತ್ತಲೇ ತನಗೆ ನಿನ್ನ ಈ ನಡುವಳಿಕೆ ಇಷ್ಟವಾಗುತ್ತಿಲ್ಲ ಎಂದು ನಯವಾಗಿ ಹೇಳಬೇಕು. ಆದಷ್ಟು ಇಂತಹ ಸ್ನೇಹಿತರಿಂದ ದೂರವಿರುವಂತೆ ಗಂಡನಿಗೆ ತಿಳಿಹೇಳಬೇಕು. ಮತ್ತು ಆತನನ್ನು ಮನೆಗೆ ಕರೆದೊಯ್ಯುವ ಸಂದರ್ಭ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು. ಇಲ್ಲವೇ ಆತನಿಗೆ ಒಬ್ಬ  ಉತ್ತಮ ಸಂಗಾತಿಯನ್ನು ಹುಡುಕಿಕೊಡುವ ಜವಾಬ್ಧಾರಿ ಹೊತ್ತುಕೊಳ್ಳಿ!

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಹಿಳೆಯರು ಹೀಗೆ ಮಾಡುವುದರಿಂದ ಗರ್ಭಿಣಿಯಾಗಲು ತೊಂದರೆಯಾಗುತ್ತಾ?