Publish Date: Tue, 30 Jul 2019 (09:05 IST)
Updated Date: Tue, 30 Jul 2019 (09:06 IST)
ಬೆಂಗಳೂರು: ಸಂಭೋಗ ಕ್ರಿಯೆ ಬಳಿಕ ಜನನಾಂಗ ಸ್ವಚ್ಛ ಮಾಡಬಹುದೇ? ಮಾಡಿದರೆ ತೊಂದರೆಯಾಗುತ್ತದೆಯೇ ಎಂದು ಅನೇಕ ಗೊಂದಲಗಳು ಹಲವರಿಗಿದೆ.
ಮಿಲನ ಕ್ರಿಯೆಗೆ ಮೊದಲು ಜನನಾಂಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಆದರೆ ಮಿಲನ ಕ್ರಿಯೆ ಬಳಿಕ ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವ ಮಹಿಳೆ ಒಂದು ಗಂಟೆ ಬಿಟ್ಟು ಜನನಾಂಗ ಸ್ವಚ್ಛ ಮಾಡಿದರೆ ಒಳಿತು.
ಸಂಭೋಗದ ನಂತರ ಜನನಾಂಗ ಸ್ವಚ್ಛ ಮಾಡಬೇಕು ಎಂದೇನಿಲ್ಲ. ಹಾಗಿದ್ದರೂ ಇದು ಆಯಾ ಜನರಿಗೆ ಬಿಟ್ಟ ವಿಚಾರ. ಒಂದು ವೇಳೆ ಗರ್ಭಧಾರಣೆಗೆ ಪ್ರಯತ್ನಿಸದೇ ಇದ್ದರೆ ತಕ್ಷಣವೇ ಸ್ವಚ್ಛ ಮಾಡಿದರೂ ತಪ್ಪಿಲ್ಲ.