Publish Date: Mon, 29 Jul 2019 (09:09 IST)
Updated Date: Mon, 29 Jul 2019 (09:11 IST)
ಬೆಂಗಳೂರು: ಪುರುಷರಂತೇ ಮಹಿಳೆಯರಲ್ಲೂ ಲೈಂಗಿಕ ಬಯಕೆಯಾದಾಗ, ಸುಖ ಪ್ರಾಪ್ತಿಯಾದಾಗ ಅಥವಾ ಮುಟ್ಟಾಗಿ ಕೆಲವು ದಿನಗಳ ಬಳಿಕ ಬಿಳಿಸ್ರಾವವಾಗುವುದು ಸಹಜ. ಆದರೆ ಈ ರೀತಿ ಆಗುವುದರಿಂದ ವೀಕ್ ಆಗುತ್ತಾರೆಯೇ? ಅಥವಾ ಬೇರೆ ಯಾವುದಾದರೂ ಸಮಸ್ಯೆಯಾಗಬಹುದೇ ಎಂಬ ಆತಂಕ ಹಲವರಿಗೆ ಕಾಡುತ್ತದೆ.
ಬಿಳಿಸ್ರಾವ ಎನ್ನುವುದು ಮಹಿಳೆಯರಲ್ಲಿ ಸಹಜ ಪ್ರಕ್ರಿಯೆ. ಆದರೆ ವಿಪರೀತ ವಾಸನೆ, ಅಸಹಜ ಬಣ್ಣದಿಂದ ಸ್ರಾವವಾಗುತ್ತಿದ್ದರೆ ಮಾತ್ರ ತಜ್ಞ ವೈದ್ಯರಿಗೆ ತೋರಿಸಿಕೊಳ್ಳುವುದು ಉತ್ತಮ. ಸಹಜವಾಗಿ ಯಾವುದೇ ತೊಂದರೆ ಕಾಣುತ್ತಿಲ್ಲವೆಂದರೆ ಈ ರೀತಿ ಸ್ರಾವವಾಗುವುದರಿಂದ ತೊಂದರೆಯೇನೂ ಇಲ್ಲ. ಇದರಿಂದ ವೀಕ್ ಆಗುತ್ತೇವೆ ಎನ್ನುವುದೆಲ್ಲಾ ತಪ್ಪು ಕಲ್ಪನೆಯಷ್ಟೇ.