ಬೆಂಗಳೂರು: ಕೆಲವರಿಗೆ ಅಂಗಾಲು ಒಡೆದು ಅಸಹ್ಯವಾಗಿ ಕಾಣುತ್ತದೆ ಎಂಬ ಚಿಂತೆಯಿರುತ್ತದೆ. ಹಾಗಿದ್ದರೆ ಅಂಗಾಲು ಒಡೆಯುವುದನ್ನು ನಿವಾರಿಸಲು ಸರಳ ಮನೆ ಮದ್ದು ಏನೆಂದು ನೋಡೋಣ.
ಕೆಲವರಿಗೆ ವಿಶೇಷವಾಗಿ ಶೈತ್ಯ ಹವೆಯಲ್ಲಿ ಅಂಗಾಲು ಒಡೆದು ಪಾದ ಊರಲಾಗದಷ್ಟು ನೋವಾಗುತ್ತದೆ. ಮತ್ತೆ ಕೆಲವರಿಗೆ ಅಷ್ಟಿಲ್ಲದಿದ್ದರೂ ಕಾಲಿನ ಸೌಂದರ್ಯ ಹಾಳಾಗುತ್ತಿದೆ ಎಂಬ ಚಿಂತೆಯಿರುತ್ತದೆ. ಅಂಗಾಲು ಒಡೆದು ಅಸಹ್ಯವಾಗಿ ಕಂಡರೆ ಬೇರೆಯವರ ಮುಂದೆ ಒಂಥರಾ ಮುಜುಗರವಾಗುವುದು ಸಹಜ. ಹಾಗಿದ್ದರೆ ಅಂಗಾಲು ಒಡೆದಾಗ ಏನೆಲ್ಲಾ ಮನೆ ಮದ್ದು ಮಾಡಬಹುದು ನೋಡಿ.
-
ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಕಾಲು ತೊಳೆದುಕೊಂಡು ಸಾಕ್ಸ್ ಅಥವಾ ಕವರ್ ಕಟ್ಟಿಕೊಂಡು ಮಲಗಿ.
-
ಬೇವಿನ ಎಲೆಯನ್ನು ಅರೆದು ಅದಕ್ಕೆ ಅರಶಿನ ಬೆರೆಸಿ ಪೇಸ್ಟ್ ಮಾಡಿಕೊಂಡು ಹಚ್ಚಿ 15 ನಿಮಿಷ ಬಿಟ್ಟು ಹದ ಬಿಸಿ ನೀರಿನಲ್ಲಿ ತೊಳೆಯಿರಿ.
-
ಬಿಸಿ ನೀರಿಗೆ ಕೊಂಚ ಜೇನು ತುಪ್ಪ ಬೆರೆಸಿ ಅಂಗಾಲನ್ನು ಆ ನೀರಿನಲ್ಲಿ ಮುಳುಗಿಸಿಡಿ. ಪ್ರತಿನಿತ್ಯ 10 ನಿಮಿಷ ಹೀಗೆ ಮಾಡಿದರೆ ಸಾಕು.
-
ಎಳ್ಳೆಣ್ಣೆಯನ್ನು ಬಿಸಿ ಮಾಡಿ ಪ್ರತಿನಿತ್ಯ ಅಂಗಾಲಿಗೆ ಹಚ್ಚಿಕೊಂಡು ಮಸಾಜ್ ಮಾಡಿ.
-
ರಾತ್ರಿ ಮಲಗುವ ಮುನ್ನ ಹದಬಿಸಿ ನೀರಿಗೆ ಉಪ್ಪು ಸೇರಿಸಿಕೊಂಡು ಆ ನೀರಿನಲ್ಲಿ 10 ನಿಮಿಷ ಅಂಗಾಲು ಮುಳುಗಿಸಿಡಿ.