Select Your Language

Notifications

webdunia
webdunia
webdunia
webdunia

ಚರ್ಮದ ಹೊಳಪು ಹೆಚ್ಚಿಸಬೇಕಾ? ಹಾಗಿದ್ದರೆ ಇವುಗಳನ್ನು ಸೇವಿಸಿ

Skin

Krishnaveni K

ಬೆಂಗಳೂರು , ಬುಧವಾರ, 14 ಫೆಬ್ರವರಿ 2024 (13:55 IST)
ಬೆಂಗಳೂರು: ನಿಮ್ಮ ಬೆಳಗಿನ ಉಪಾಹಾರದಲ್ಲಿ ಈ ಕೆಲವೊಂದು ವಸ್ತುಗಳನ್ನು ಸೇವಿಸಿದರೆ ನಿಮ್ಮ ಚರ್ಮದ ಹೊಳಪು ಹೆಚ್ಚುತ್ತದೆ. ಅಂತಹ ಆಹಾರಗಳು ಯಾವುವು ನೋಡೋಣ.

ಬೆಳಗಿನ ಉಪಾಹಾರ ಸೇವಿಸುವುದು ಎಷ್ಟು ಮುಖ್ಯವೋ, ಎಷ್ಟು ಪೋಷಕಾಂಶಭರಿತ, ಆರೋಗ್ಯಕರ ಆಹಾರ ಸೇವಿಸುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ. ಚರ್ಮ ಕಾಂತಿಯುತವಾಗಿದ್ದರೆ ಸೌಂದರ್ಯವೂ ಸಹಜವಾಗಿಯೇ ಎದ್ದು ಕಾಣುವಂತಿರುತ್ತದೆ. ಬೆಳ್ಳಂ ಬೆಳಿಗ್ಗೆ ಅತಿಯಾದ ಮಸಾಲೆ, ಜಿಡ್ಡುಯುಕ್ತ ಆಹಾರ ಸೇವನೆ ಮಾಡಿದರೆ ಚರ್ಮಕ್ಕೆ ಒಳ್ಳೆಯದಲ್ಲ. ಹಾಗಿದ್ದರೆ ಎಂತಹ ಆಹಾರ ಸೇವಿಸಿದರೆ ಉತ್ತಮ?

ಬೆರ್ರಿ ಹಣ್ಣಗಳು
ಸ್ಟ್ರಾಬೆರಿ, ಬ್ಲ್ಯಾಕ್ ಬೆರಿ, ಬ್ಲೂ ಬೆರಿಯಂತಹ ಹಣ್ಣುಗಳನ್ನು ಬೆಳಿಗ್ಗೆ ಸಲಾಡ್ ರೀತಿಯಲ್ಲಿ ಅಥವಾ ಹಾಗೆಯೇ ಸೇವಿಸುವುದನ್ನು ಅಭ್ಯಾಸ ಮಾಡಿ. ಈ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಚರ್ಮಕ್ಕೆ ಉತ್ತಮ.
ಓಟ್ಸ್: ಓಟ್ಸ್ ಮೀಲ್ ನ್ನು ಬೆಳಿಗ್ಗೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಅದೇ ರೀತಿ ಇದನ್ನು ಬೆಳಿಗ್ಗೆ ಉಪಾಹಾರವಾಗಿ ಸೇವಿಸುವುದರಿಂದ ಚರ್ಮಕ್ಕೂ ಒಳ್ಳೆಯದು. ಇದರಲ್ಲಿ ಬಿಟಾ ಗ್ಲುಕೋನ್ಸ್ ಇದ್ದು, ಚರ್ಮವನ್ನು ತೇವಾಂಶಭರಿತವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಅಲ್ಲದೆ, ಚರ್ಮಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ.
ಗ್ರೀಕ್ ಯೋಗರ್ಟ್: ಪ್ರೊಟಿನ್ ಮತ್ತು ಪ್ರೊ ಬಯೋಟಿಕ್ಸ್ ಹೇರಳವಾಗಿರುವ ಗ್ರೀಕ್ ಯೋಗರ್ಟ್ ಸೇವಿಸಿ. ಇದರಲ್ಲಿರುವ ಆರೋಗ್ಯಕರ ಅಂಶಗಳು ಚರ್ಮದ ಆರೋಗ್ಯ ಕಾಪಾಡುವುದಲ್ಲದೆ, ಉರಿಯೂತವಾಗದಂತೆ ತಡೆಯುತ್ತದೆ. ಗ್ರೀಕ್ ಯೋಗರ್ಟ್, ಜೇನು ತುಪ್ಪದ ಜೊತೆಗೆ ಆರೋಗ್ಯಕರ ಹಣ್ಣುಗಳನ್ನು ಬೆರೆಸಿ ಉಪಾಹಾರವಾಗಿ ಸೇವಿಸಿ ನೋಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿಗರಿಗೆ ಕಾಡುತ್ತಿದೆ ವಿಟಮಿನ್ ಡಿ ಕೊರತೆ: ಕಾರಣವೇನು?