Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿದರೆ ಏನಾಗುತ್ತದೆ?

beauty tips

Krishnaveni K

ಬೆಂಗಳೂರು , ಶನಿವಾರ, 27 ಜನವರಿ 2024 (09:00 IST)
ಬೆಂಗಳೂರು: ಕೊಬ್ಬರಿ ಎಣ್ಣೆಯಲ್ಲಿ ಅನೇಕ ಪೋಷಕಾಂಶಗಳಿದ್ದು, ನಮ್ಮ ಚರ್ಮಕ್ಕೆ ಮತ್ತು ಚರ್ಮ ಸಂಬಂಧೀ ಅನೇಕ ಸಮಸ್ಯೆಗಳಿಗೆ ದಿವ್ಯ ಔಷಧಿಯಾಗಿದೆ.

ಬಹುತೇಕ ಚರ್ಮದ ತಜ್ಞರ ವೈದ್ಯರು, ಸೌಂದರ್ಯ ತಜ್ಞರೂ ಕೊಬ್ಬರಿ ಎಣ್ಣೆ ಬಳಕೆಗೆ ಹೆಚ್ಚು ಒತ್ತುಕೊಡುತ್ತಾರೆ. ಇದು ನ್ಯಾಚುರಲ್ ಆಗಿ ನಮ್ಮ ಚರ್ಮಕ್ಕೆ ತೇವಾಂಶ ತಂದುಕೊಡುವ ಸಾಮರ್ಥ್ಯ ಹೊಂದಿದೆ. ನಮ್ಮ ಹಿರಿಯರೂ ಹೆಚ್ಚು ಕೊಬ್ಬರಿ ಎಣ್ಣೆಯನ್ನು ಚರ್ಮಕ್ಕೆ ಮಸಾಜ್ ಮಾಡಲು ಬಳಸುತ್ತಿದ್ದುದೂ ಇದೇ ಕಾರಣಕ್ಕೆ.

ಚಳಿಗಾಲದಲ್ಲಿ ಬಹುತೇಕರು ಚರ್ಮ ಸುಕ್ಕುಗಟ್ಟುವ ಸಮಸ್ಯೆ ಅಥವಾ ಕಲೆ, ಬಿಳಿಯಾಗುವಿಕೆ ಇತ್ಯಾದಿ ಸಮಸ್ಯೆ ಎದುರಿಸುತ್ತಾರೆ. ಇಂತಹ ಎಲ್ಲಾ ಸಮಸ್ಯೆಗಳಿಗೆ ಕೊಬ್ಬರಿ ಎಣ್ಣೆ ರಾಮಬಾಣ. ಕೊಬ್ಬರಿ ಎಣ್ಣೆಯಲ್ಲಿ ಚರ್ಮಕ್ಕೆ ಬೇಕಾದ ವಿಟಮಿನ್ ಇ ಅಂಶ ಹೇರಳವಾಗಿದೆ. ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಹದ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮ ಸುಕ್ಕುಗಟ್ಟುವುದು ತಪ್ಪುತ್ತದೆ.

ಕೊಬ್ಬರಿ ಎಣ್ಣೆಯನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮದಲ್ಲಿ ತೇವಾಂಶ ಉಳಿದು ಮುಖ ಕಾಂತಿಯುತವಾಗುತ್ತದೆ. ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲ ಲಾರಿಕ್ ಆಸಿಡ್ ಚರ್ಮವನ್ನು ಬೇಧಿಸಿ ತೇವಾಂಶ ಉಳಿಯುವಂತೆ ಮಾಡುತ್ತದೆ.

ಅಷ್ಟೇ ಏಕೆ, ಮುಖದಲ್ಲಿ ಉಂಟಾಗುವ ಕಪ್ಪು ಕಲೆಗಳು, ಸಣ್ಣ ಗುಳ್ಳೆಗಳಿಂದ ಮುಖದ ಅಂದಗೆಡದಂತೆ ಕೊಬ್ಬರಿ ಎಣ್ಣೆ ಕಾಪಾಡುತ್ತದೆ. ಹೀಗಾಗಿ ಪ್ರತಿನಿತ್ಯ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಐದು ನಿಮಿಷ ಮೃದುವಾಗಿ ಮುಖಕ್ಕೆ ಮಸಾಜ್ ಮಾಡುವುದನ್ನು ಮರೆಯಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೊತ್ತಂಬರಿ ಸೊಪ್ಪು ಬೇಗನೇ ಹಾಳಾಗದಂತೆ ಇಡಲು ಟಿಪ್ಸ್