Select Your Language

Notifications

webdunia
webdunia
webdunia
webdunia

ಕಿತ್ತಳೆ ಹಣ್ಣನ್ನು ಯಾರು ಸೇವಿಸಬಾರದು?

orange

Krishnaveni K

ಬೆಂಗಳೂರು , ಸೋಮವಾರ, 12 ಫೆಬ್ರವರಿ 2024 (11:50 IST)
ಬೆಂಗಳೂರು: ಹಣ್ಣನ್ನು ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಉತ್ತಮ ಎನ್ನುವುದೇನೋ ಹೌದು. ಆದರೆ ಕೆಲವೊಂದು ಹಣ್ಣಿನಲ್ಲಿ ಗುಣದ ಜೊತೆ ಅವಗುಣಗಳೂ ಇರುತ್ತವೆ.

ಅಂತಹ ಹಣ್ಣುಗಳಲ್ಲಿ ಕಿತ್ತಳೆ ಕೂಡಾ ಒಂದು. ವಿಟಮಿನ್ ಸಿ ಅಂಶ ಹೇರಳವಾಗಿರುವ ಕಿತ್ತಳೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹೀಗಾಗಿ ಶೀತ, ಜ್ವರದಂತಹ ಸಮಸ್ಯೆಗಳು ಬರದಂತೆ ಕಿತ್ತಳೆ ಹಣ್ಣನ್ನು ಹೇರಳವಾಗಿ ಸೇವಿಸಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಕೆಲವೊಂದು ಖಾಯಿಲೆಗೆ ಕಿತ್ತಳೆ ಸೇವನೆ ಉತ್ತಮವಲ್ಲ. ಅವು ಯಾವುವು ನೋಡೋಣ.

ಯಾರು ಕಿತ್ತಳೆ ಸೇವಿಸಬಾರದು?
ಕಿತ್ತಳೆ ಕೆಲವರಿಗೆ ಎದೆ ಉರಿ ಅಥವಾ ಅಸಿಡಿಟಿ ಸಮಸ್ಯೆ ಉಂಟು ಮಾಡಬಹುದು. ಇದಲ್ಲಿರುವ ಹುಳಿ ಅಂಶ ಇದಕ್ಕೆ ಕಾರಣ. ಅದೇ ರೀತಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುವವರಿಗೆ ನೋವು ಹೆಚ್ಚಾಗುವಂತೆ ಮಾಡಬಹುದು. ಅದೇ ರೀತಿ ನೆಗಡಿ ಬರುವ ಮೊದಲು ಕಿತ್ತಳೆ ಸೇವಿಸಬೇಕು. ಆದರೆ ನೆಗಡಿಯಿದ್ದಾಗ ಕಿತ್ತಳೆ ಸೇವಿಸಲು ಹೋಗಬೇಡಿ. ಈ ಸಂದರ್ಭದಲ್ಲಿ ಸೇವಿಸುವುದರಿಂದ ಕಫ ಮತ್ತು ಕೆಮ್ಮು ಬರುವ ಸಾಧ‍್ಯತೆಯಿದೆ.

ಹಲ್ಲಿನ ಸಮಸ್ಯೆ ಇರುವವರು ಕಿತ್ತಳೆ ಸೇವಿಸಬಾರದು. ಇದರಿಂದ ಕಿತ್ತಳೆಯಲ್ಲಿರುವ ಕ್ಯಾಲ್ಶಿಯಂ ಬ್ಯಾಕ್ಟೀರಿಯಾ ಬೆಳವಣಿಗೆ ಹೆಚ್ಚಲು ಕಾರಣವಾಗಬಹುದು. ಇದರಿಂದ ಹಲ್ಲು ಮತ್ತಷ್ಟು ಹಾಳಾಗಬಹುದು. ಅದೇ ರೀತಿ ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿದ್ದರೆ ಕಿತ್ತಳೆ ತಿನ್ನದೇ ಇರುವುದು ಉತ್ತಮ. ಹೀಗಾಗಿ ಈ ಸಮಸ್ಯೆಯಿರುವವರು ಕಿತ್ತಳೆ ಸೇವಿಸಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಪೋಸ್ ಡೇ ಹಿಂದಿದೆ ಇಂಟರೆಸ್ಟಿಂಗ್ ಕತೆ