Select Your Language

Notifications

webdunia
webdunia
webdunia
webdunia

ದೇಹದ ತೂಕ ಇಳಿಸಿಕೊಳ್ಳಲು ಕೆಲವು ಟಿಪ್ಸ್‌ಗಳನ್ನು ಫಾಲೋ ಮಾಡಿ

ದೇಹದ ತೂಕ ಇಳಿಸಿಕೊಳ್ಳಲು ಕೆಲವು ಟಿಪ್ಸ್‌ಗಳನ್ನು ಫಾಲೋ ಮಾಡಿ
bangalore , ಬುಧವಾರ, 20 ಡಿಸೆಂಬರ್ 2023 (10:34 IST)
ಆಹಾರ ಸೇವನೆಯೇ ಹೆಚ್ಚಿನ ಜನರಲ್ಲಿ ತೂಕ ಹೆಚ್ಚು ಮಾಡುವ ಶತ್ರುವಾಗಿದೆ. ಒಮ್ಮೆ ಆಹಾರ ಸೇವಿಸಿದ ಮೇಲೆ ಜೀರ್ಣವಾಗಲು ಸಮಯ ಕೊಡಿ. ನಿಮಗೆ ನಿಮ್ಮ ಆಸೆಯನ್ನು ಹತ್ತಿಕ್ಕಲು ಆಗುತ್ತಿಲ್ಲ ಎಂದಾದರೆ ಆಹಾರ ಸೇವಿಸಿದ ಕೂಡಲೆ ಬ್ರಷ್ ಮಾಡಿ ಇದು ತಿನ್ನುವ ಆಸೆಯನ್ನು ಕಡಿಮೆ ಮಾಡುತ್ತದೆ. ಅಥವಾ ತಿಂಡಿ ಪೊಟ್ಟಣಗಳನ್ನು ಅಡಗಿಸಿಡಿ.
 
ಖರೀದಿಗೆ ಹೋದಾಗ ಅಥವಾ ಮಾಲ್ ಗೆ ಶಾಪಿಂಗ್ ಗೆ ಹೋದಾಗ ಖಾಲಿ ಹೊಟ್ಟೆ ಇಟ್ಟುಕೊಂಡು ಎಂದೂ ಹೋಗಬೇಡಿ. ಇದು ನೋಡಿದ್ದನ್ನೆಲ್ಲವನ್ನೂ ತೆಗೆದುಕೊಳ್ಳುವ ಹಾಗೂ ಅಲ್ಲೇ ಸೇವಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದರ ಬದಲಿಗೆ ಹೊಟ್ಟೆ ತುಂಬಿರುವಾಗ ಹೋದರೆ ಹೆಚ್ಚೇನು ತಿಂಡಿಗಳು ಬೇಕೆನಿಸುವುದಿಲ್ಲ. ಜೊತೆಗೆ ಅಗತ್ಯ ಸಾಮಗ್ರಿಗಳ ಪಟ್ಟಿ ಕೂಡ ಜೊತೆಗಿರಲಿ ಇದು ನಿಮ್ಮ ಖರೀದಿಯ ಮೇಲೆ ಮಿತಿಯನ್ನು ಸಾಧಿಸುತ್ತದೆ.
 
ತೂಕ ಕಡಿಮೆ ಮಾಡಬೇಕು ಎಂದು ಅನ್ನಿಸಿದ ದಿನದಿಂದ ನಾಲ್ಕು ದಿನಗಳ ವರೆಗೆ ಇರುವ ಉತ್ಸಾಹ ಮತ್ತೆ ಇರುವುದಿಲ್ಲ. ಇದಕ್ಕೆ ಕಾರಣ ಅದೇ ವ್ಯಾಯಾಮಗಳನ್ನು ಮಾಡಿ ಬೇಸರ ಬಂದಿರುತ್ತದೆ. ಇದಕ್ಕಾಗಿ ಕೆಲವು ಸರಳ ಮಾರ್ಗಗಳನ್ನು ಬಳಸಿ ಉದಾಹರಣೆಗೆ ನಿಮಗೆ ವಾಕಿಂಗ್ ಇಷ್ಟ ಎಂದಾದರೆ ಪ್ರತಿದಿನ ಒಂದೇ ದಾರಿಯಲ್ಲಿ ನಡೆಯಬೇಡಿ. ವಾಕಿಂಗ್ ಗೆ ಹೋಗುವ ಸ್ಥಳಗಳನ್ನು ಬದಲಾಯಿಸಿ. ವ್ಯಾಯಾಮ ಮಾಡುವಾಗಿನ ಸ್ಥಳಗಳನ್ನೂ ಹೀಗೇ ಬದಲಾಯಿಸಿ ಅಥವಾ ಹೊಸ ಮ್ಯಾಟ್ ಅಥವಾ ಬಟ್ಟೆಗಳನ್ನು ತಂದು ಉತ್ಸಾಹ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ.
 
ಅಸಮರ್ಪಕ ನಿದ್ದೆ ಹೆಚ್ಚು ಆಹಾರ ಸೇವಿಸುವಂತೆ ಮಾಡುತ್ತದೆ ಎಂದು ಸಂಶೋಧನೆಗಳು ಸಾಬೀತು ಮಾಡಿವೆ. ಹೆಚ್ಚಿನ ಆಹಾರ ಸೇವನೆಯಿಂದ ಏನಾಗುತ್ತದೆ ಎನ್ನುವುದು ನಿಮಗೆ ಗೊತ್ತೇ ಇದೆ. ಹಾಗಾಗಿ ನಿದ್ದೆಯನ್ನು ಸರಿಯಾಗಿ ಮಾಡಿ. ನಿದ್ದೆಯ ಅವಧಿಯನ್ನು ನಿಗದಿ ಪಡಿಸಿ ಅದೇ ಅವಧಿಯಲ್ಲಿ ಮಲಗುವಂತೆ ನೋಡಿಕೊಳ್ಳಿ. ಇದು ನಿಮ್ಮ ಉತ್ಸಾಹದ ಮೇಲೂ ಪ್ರಭಾವ ಬೀರುತ್ತದೆ. ಹೆಚ್ಚು ಉತ್ಸಾಹಿತರಾಗಿದ್ದಲ್ಲಿ ಹೆಚ್ಚು ಕೆಲಸ ಇದೂ ತೂಕ ಕಡಿಮೆ ಮಾಡುವ ಮಾರ್ಗವಾಗಿದೆ.
 
ಏನಾದರೂ ತಿನ್ನಬೇಕು ಎನ್ನುವ ಭಾವನೆ ಎಲ್ಲರಿಗೂ ಇದ್ದೇ ಇರುತ್ತದೆ ಮತ್ತು ನಾವು ಈ ಆಸೆಗೆ ಜಂಕ್ ಫುಡ್ ಮೂಲಕ ನೀರೆರೆಯುತ್ತೇವೆ. ಮನೆಯಲ್ಲಿ ನಾಲ್ಕು ಪ್ಯಾಕೆಟ್ ಆದರೂ ಇಂತಹ ತಿಂಡಿಗಳು ಇಲ್ಲದ ಮನೆಗಳು ಬಹಳ ವಿರಳ. ಇದನ್ನು ಸಾಧ್ಯವಾದಷ್ಟು ದೂರವಿಡಿ. ಈಗಾಗಲೇ ಸಾಕಷ್ಟು ಸೇವಿಸುತ್ತಿದ್ದರೆ ವಾರಕ್ಕಿಷ್ಟು ಎಂದು ಕಡಿಮೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ದಾಳಿಂಬೆ ಹಣ್ಣು ಸೇವನೆ ರೋಮ್ಯಾನ್ಸ್‌ಗೆ ಪೂರಕ: ದಿನನಿತ್ಯ ಸೇವಿಸಿ ನೋಡಿ