Select Your Language

Notifications

webdunia
webdunia
webdunia
webdunia

ಮೆದುಳಿನ ಕ್ಯಾನ್ಸರ್‌ ಅಪಾಯವನ್ನು ನಿಮ್ಮ ಫೋನ್ ಹೇಗೆ ಹೆಚ್ಚಿಸುತ್ತದೆ ಎಂಬುದು ಇಲ್ಲಿದೆ

ಮೆದುಳಿನ ಕ್ಯಾನ್ಸರ್‌ ಅಪಾಯವನ್ನು ನಿಮ್ಮ ಫೋನ್ ಹೇಗೆ ಹೆಚ್ಚಿಸುತ್ತದೆ ಎಂಬುದು ಇಲ್ಲಿದೆ

lalsab

ಮುಂಬೈ , ಬುಧವಾರ, 20 ಡಿಸೆಂಬರ್ 2017 (13:10 IST)
ಸಿಗ್ನಲ್‌ ದುರ್ಬಲವಾಗಿರುವಾಗ, ಸಿಗ್ನಲ್ ಟವರ್‌‌ಗಳಿಗೆ ಸಂಪರ್ಕವನ್ನು ಹೆಚ್ಚಿಸಲು ಫೋನ್ ಹೆಚ್ಚು ರೇಡಿಯೋ ಫ್ರೀಕ್ವೆನ್ಸಿ ಶಕ್ತಿಯನ್ನು ಕಳುಹಿಸುತ್ತದೆ.
ಇತ್ತೀಚಿನ ಅಧ್ಯಯನದ ಪ್ರಕಾರ, ನಿಮ್ಮ ಹಾಸಿಗೆಯಲ್ಲಿ ಅಥವಾ ನಿಮ್ಮ ತಲೆಯ ಬಳಿ ನಿಮ್ಮ ಫೋನ್‌ ಅನ್ನು ಇರಿಸಿಕೊಂಡು ಮಲಗುವುದರಿಂದ ಮಿದುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಾಗಬಹುದು ಎಂದು ಸಂಶೋಧಕರ ಗುಂಪು ತಿಳಿಯಪಡಿಸಿದೆ.
 
ಫೋನ್‌ಗಳ ರೇಡಿಯೋ ಆವರ್ತನ ಶಕ್ತಿ ಹೊರಸೂಸುತ್ತವೆ, ಕೆಲವು ವಿಜ್ಞಾನಿಗಳು ಇದು ಮೆದುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನಂಬುತ್ತಾರೆ, ಮತ್ತು ಅಕೌಸ್ಟಿಕ್ ನರ ಮತ್ತು ಲವಣ ಗ್ರಂಥಿಗಳ ಗಡ್ಡೆಗಳಿಗೆ ಕಾರಣವಾಗುತ್ತದೆ ಎಂದು Express.co.uk ವರದಿ ಮಾಡಿದೆ.
 
ರೇಡಿಯೋ ತರಂಗಾಂತರ ಶಕ್ತಿಯು ವೀರ್ಯಾಣುವಿನ ಎಣಿಕೆಗಳನ್ನು ಕಡಿಮೆ ಮಾಡುತ್ತದೆ.
 
ಮೊಬೈಲ್ ಫೋನ್‌ಗಳನ್ನು ಬಳಸುವ ಯಾವುದೇ ನಿರ್ಣಾಯಕ ಆರೋಗ್ಯದ ಪರಿಣಾಮಗಳನ್ನು ಸಂಶೋಧಕರು ಬಹಿರಂಗಪಡಿಸಲಿಲ್ಲ, ಆದರೆ ಹೇಗಾದರೂ ತಮ್ಮ ಅಪಾಯವನ್ನು ಕಡಿಮೆಗೊಳಿಸಲು ಬಯಸುವ ಜನರು ಮೊಬೈಲ್ ಫೋನ್ ಅನ್ನು ನಿದ್ದೆ ಮಾಡುವಾಗ ದೂರವಿರುವಂತೆ ನೋಡಿಕೊಳ್ಳಬೇಕು.
 
ಆರೋಗ್ಯ ಇಲಾಖೆ ಈ ರೀತಿಯಾಗಿ ಹೇಳಿದೆ, "ಫೋನ್ ಟವರ್‌‌ಗೆ ಸಿಗ್ನಲ್‌ಗಳನ್ನು ಕಳುಹಿಸಿದಾಗ, ರೇಡಿಯೊ ಆವರ್ತನ ಶಕ್ತಿಯು ಫೋನ್‌ನ ಅಂಟೆನಾದಿಂದ ಎಲ್ಲಾ ದಿಕ್ಕುಗಳಲ್ಲಿಯೂ ಚಲಿಸುತ್ತದೆ, ಫೋನ್ ಅನ್ನು ಬಳಸುವ ವ್ಯಕ್ತಿಯ ತಲೆ ಮತ್ತು ದೇಹಕ್ಕೂ ಸೇರಿಕೊಳ್ಳುತ್ತದೆ.
 
ಜನರು ಬ್ಯಾಗ್‌ ಅಥವಾ ಪರ್ಸ್‌ಗಳಲ್ಲಿ ತಮ್ಮ ಫೋನ್‌ಗಳನ್ನು ಕೊಂಡೊಯ್ಯುವ ಮೂಲಕ ಮೆದುಳಿನ ಕ್ಯಾನ್ಸರ್‌ ಅಪಾಯವನ್ನು ತಡೆಗಟ್ಟಬಹುದು - ಅವರ ಪಾಕೆಟ್‌ಗಳಲ್ಲಿ ಅಲ್ಲ. ಒಂದು ಅಥವಾ ಎರಡು ಸಿಗ್ನಲ್ ಬಾರ್‌ಗಳನ್ನು ಮಾತ್ರ ಹೊಂದಿರುವಾಗ ಫೋನ್‌ಗಳ ಬಳಕೆಯನ್ನು ಮಾಡಬಾರದು ಅಥವಾ ಬಳಕೆಯನ್ನು ಕಡಿಮೆ ಮಾಡಬೇಕು.
 
ಸಿಗ್ನಲ್‌ ದುರ್ಬಲವಾಗಿರುವಾಗ, ಸಿಗ್ನಲ್ ಟವರ್‌‌ಗಳಿಗೆ ಸಂಪರ್ಕವನ್ನು ಹೆಚ್ಚಿಸಲು ಫೋನ್ ಹೆಚ್ಚು ರೇಡಿಯೋ ಫ್ರೀಕ್ವೆನ್ಸಿ ಶಕ್ತಿಯನ್ನು ಕಳುಹಿಸುತ್ತದೆ.
 
ವೈರ್‌ಲೆಸ್ ಹೆಡ್‌ಸೆಟ್‌‌‌ಗಳನ್ನು ಬಳಸುವುದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ, ಏಕೆಂದರೆ ಅವುಗಳು ಮೊಬೈಲ್ ಫೋನ್‌ಗಿಂತ ಕಡಿಮೆ ಶಕ್ತಿಯನ್ನು ಹೊರಸೂಸುತ್ತವೆ. ಮೊಬೈಲ್ ಫೋನ್ ಬಳಕೆ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಯಾವ ರೀತಿಯ ಪಾತ್ರವಹಿಸುತ್ತದೆ ಎಂಬುದನ್ನು ಕಂಡುಹಿಡಿಯಲು ಸಂಶೋಧನೆ ನಡೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಈ ಜ್ಯೂಸ್‌ಗಳನ್ನು ಕುಡಿದು ತ್ವಚೆಯ ಕಾಂತಿ ಹೆಚ್ಚಿಸಿ!!