Select Your Language

Notifications

webdunia
webdunia
webdunia
webdunia

ಈ ಜ್ಯೂಸ್‌ಗಳನ್ನು ಕುಡಿದು ತ್ವಚೆಯ ಕಾಂತಿ ಹೆಚ್ಚಿಸಿ!!

ಈ ಜ್ಯೂಸ್‌ಗಳನ್ನು ಕುಡಿದು ತ್ವಚೆಯ ಕಾಂತಿ ಹೆಚ್ಚಿಸಿ!!

ನಾಗಶ್ರೀ ಭಟ್

ಬೆಂಗಳೂರು , ಬುಧವಾರ, 20 ಡಿಸೆಂಬರ್ 2017 (12:53 IST)
ತಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಮಹಿಳೆಯರು ಹಲವು ಬಗೆಯ ಕ್ರೀಮ್‌ಗಳು, ಔಷಧಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಇನ್ನು 30 ವರ್ಷದ ಆಸುಪಾಸಿನಲ್ಲಿರುವವರಿಗಂತೂ ಇದು ಬಹಳ ಗಂಭೀರವಾದ ಸಮಸ್ಯೆಯಾಗಿಯೇ ಪರಿಣಮಿಸಿರುತ್ತದೆ.

ಈ ಜ್ಯೂಸ್‌ಗಳನ್ನು ಕುಡಿಯುವ ಮೂಲಕ ನಿಮ್ಮ ತ್ವಚೆಯನ್ನು ಕಾಂತಿಯುಕ್ತವಾಗಿ ಮಾಡಿಕೊಳ್ಳಬಹುದು. ನಿಮಗೂ ಇದನ್ನು ತಿಳಿದುಕೊಳ್ಳಬೇಕಾದಲ್ಲಿ ಈ ಕೆಳಗಿನವುಗಳನ್ನು ಗಮನಿಸಿ.
 
* 3-4 ಕ್ಯಾರೆಟ್, ಚೂರು ಶುಂಠಿ ಮತ್ತು ನೀರನ್ನು ಸೇರಿಸಿ ಕ್ಯಾರೆಟ್ ಜ್ಯೂಸ್ ಮಾಡಿ ವಾರದಲ್ಲಿ 3-4 ಬಾರಿ ಕುಡಿಯುತ್ತಾ ಬನ್ನಿ. ಇದು ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಅದು ಚರ್ಮದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಇದು ಚರ್ಮದ ಕಾಂತಿಗೆ ಮಾತ್ರವಲ್ಲದೆ ಕಣ್ಣಿನ ದೃಷ್ಟಿಗೂ ಕೂಡಾ ಬಹಳ ಒಳ್ಳೆಯದು.
 
* ದಿನವೂ ಬೆಳಿಗ್ಗೆ ಒಂದು ಲೋಟ ಬೆಚ್ಚಗಿನ ನೀರಿಗೆ 1 ಚಮಚ ಜೇನು, 2 ಚಮಚ ನಿಂಬೆ ರಸವನ್ನು ಸೇರಿಸಿ ಕುಡಿಯುತ್ತಾ ಬಂದರೆ ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
 
* 2-3 ಹಾಗಲಕಾಯಿಗೆ 2 ಚಮಚ ನಿಂಬೆರಸ ಮತ್ತು ರುಚಿಗೆ ಉಪ್ಪು ಮತ್ತು ಮೆಣಸಿನಕಾಳಿನ ಪುಡಿಯನ್ನು ಸೇರಿಸಿ 2-3 ದಿನಕ್ಕೊಮ್ಮೆ ಜ್ಯೂಸ್ ಮಾಡಿ ಕುಡಿಯಿರಿ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ಸೋಂಕನ್ನು ನಿವಾರಿಸುತ್ತದೆ, ರಕ್ತವನ್ನು ಶುದ್ಧೀಕರಿಸಿ ಚರ್ಮವನ್ನು ಕಾಂತಿಯುತವನ್ನಾಗಿ ಮಾಡುತ್ತದೆ.
 
* ಪ್ರತಿದಿನವೂ ಒಂದು ಲೋಟ ನೀರಿಗೆ 1 ಚಮಚ ಗ್ರೀನ್ ಟಿ ಪುಡಿಯನ್ನು ಹಾಕಿ ಕುದಿಸಿ ರುಚಿಗೆ ತಕ್ಕಷ್ಟು ಬ್ರೌನ್ ಶುಗರ್ ಅನ್ನು ಸೇರಿಸಿಕೊಂಡು ಕುಡಿಯುತ್ತಾ ಬನ್ನಿ. ಇದು ಮುಖದ ಸುಕ್ಕುಗಟ್ಟುವಿಕೆಯನ್ನು ತಡೆದು ನಿಮ್ಮ ವಯಸ್ಸನ್ನು ಕಡಿಮೆಯಾಗಿ ಕಾಣುವಂತೆ ಮಾಡುತ್ತದೆ.
 
* 2-3 ನೆಲ್ಲಿಕಾಯಿಯ ಬೀಜವನ್ನು ಬೇರ್ಪಡಿಸಿಕೊಂಡು ಅದನ್ನು ನುಣ್ಣಗೆ ರುಬ್ಬಿ ಒಂದು ಲೋಟ ನೀರಿಗೆ ಸೇರಿಸಿಕೊಂಡು ಕುಡಿಯಿರಿ. ಇದಕ್ಕೆ ರುಚಿಗೆ ನೀವು ಉಪ್ಪು, ಸಕ್ಕರೆ ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿಕೊಂಡು ಕುಡಿಯಬಹುದು. ಇದು ದೇಹದ ಎಲ್ಲಾ ರೀತಿಯ ಆರೋಗ್ಯಕ್ಕೆ ಉತ್ತಮವಾಗಿದ್ದು ಚರ್ಮ ವ್ಯಾಧಿಗಳನ್ನು ತಡೆಯುತ್ತದೆ ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಎರಡು ಬಾರಿ ಇದನ್ನು ಕುಡಿಯಿರಿ.
 
* ಒಂದು ಲೋಟ ನೀರಿಗೆ 2 ಇಂಚು ಅಲೋವೆರಾದ ಜೆಲ್ ಅನ್ನು ಬೇರ್ಪಡಿಸಿಕೊಂಡು ಸೇರಿಸಿ ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ, ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಮಹಿಳೆಯರ ಮುಟ್ಟಿನ ಸಮಸ್ಯೆಗಳಿಗೆ ಉತ್ತಮ ಔಷಧವಾಗಿದೆ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ 2-3 ಬಾರಿ ಇದನ್ನು ಕುಡಿಯಿರಿ.
 
* ಒಂದು ಸೌತೆಕಾಯಿ, ಉಪ್ಪು ಮತ್ತು ಚೂರು ಶುಂಠಿಯನ್ನು ಸೇರಿಸಿಕೊಂಡು ಪ್ರತಿದಿನ ಒಂದು ಲೋಟ ಜ್ಯೂಸ್ ಮಾಡಿಕೊಂಡು ಕುಡಿಯಿರಿ. ಸೌತೇಕಾಯಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ದೇಹವನ್ನು ಫ್ರೆಶ್ ಆಗಿರುವಂತೆ ಮಾಡುತ್ತದೆ.
 
* ಪ್ರತಿದಿನ ಒಂದು ಲೋಟ ಬೀಟ್ರೂಟ್ ಜ್ಯೂಸ್ ಮಾಡಿ ಕುಡಿಯಿರಿ. ಇದು ವಿಟಮಿವನ್ ಎ, ಸಿ ಮತ್ತು ಕೆ ಮತ್ತು ಅಧಿಕ ಕಬ್ಬಿಣದ ಅಂಶ ಮತ್ತು ಪೊಟ್ಯಾಸಿಯಂ ಅನ್ನು ಹೊಂದಿದೆ. ಇದು ತ್ವಚೆಯ ಮೇಲಿರುವ ಕಲೆಗಳನ್ನು ಮತ್ತು ಇತರ ಲೋಪದೋಷಗಳನ್ನು ಹೋಗಲಾಡಿಸುತ್ತದೆ.
 
ಹೀಗೆ ಸರಳವಾಗಿ ಜ್ಯೂಸ್ ಮಾಡಿಕೊಂಡು ಕುಡಿದರೆ ತ್ವಚೆಯು ಕಾಂತಿಯುತವಾಗುವುದಾದರೆ ನೀವೂ ಒಮ್ಮೆ ಪ್ರಯತ್ನಿಸಬಹುದಲ್ಲವೇ...!?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಸಂದರ್ಭ ಪುರುಷರು ಏನೆಲ್ಲಾ ಬಯಸುತ್ತಾರೆ?