Publish Date: Wed, 20 Dec 2017 (11:39 IST)
Updated Date: Wed, 20 Dec 2017 (12:01 IST)
ಚೆನ್ನೈ: ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ಜಯಲಲಿತಾ ಸಾವಿನ ಸುದ್ದಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಅಮ್ಮ ಆಸ್ಪತ್ರೆಗೆ ದಾಖಲಾಗುವ ಮೊದಲೇ ಸತ್ತಿದ್ದರು ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಈಗ ಮಹತ್ತರವಾದ ವಿಡಿಯೋವೊಂದು ಟಿಟಿವಿ ದಿನಕರನ್ ಬಣದವರು ಬಿಡುಗಡೆ ಮಾಡಿದ್ದಾರೆ. ಬೈ ಎಲೆಕ್ಷನ್ ಹಿನ್ನೆಲೆ ಈ ವಿಡಿಯೋ ರಿಲೀಸ್ ಆಗಿರುವುದು ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಅವರು ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆಯಲು ಈ ವಿಡಿಯೋ ರಿಲೀಸ್ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
ಬೆಡ್ ಮೇಲೆ ಕುಳಿತು ಜಯಲಲಿತಾ ಜ್ಯೂಸ್ ಕುಡಿಯುತ್ತಿರುವ ವಿಡಿಯೋವೊಂದು ಬಿಡುಗಡೆಯಾಗಿದೆ. ವಿಡಿಯೋವನ್ನು ಆಸ್ಪತ್ರೆಯಲ್ಲಿ ಸಂಬಂಧಿಕರು ಸೆರೆ ಹಿಡಿದಿದ್ದಾರೆ ಎಂದು ಚೆನ್ನೈನ ಅಪೋಲೋ ಆಸ್ಪತ್ರೆ ಅವರು ಸ್ಪಷ್ಟಿಕರಣ ನೀಡಿದ್ದಾರೆ.
ಅಮ್ಮನಿಗೆ ಸಂಬಂಧಪಟದ್ಟ ವಿಡಿಯೋ ಇನ್ನೂ ಇದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಡಿಯೋ ಬಿಡುಗಡೆ ಮಾಡುತ್ತೇವೆ.
ಆಸ್ಪತ್ರೆಯಲ್ಲಿ ಅಮ್ಮ ಚೆನ್ನಾಗಿಯೇ ಇದ್ರು ಎಂದು ಟಿಟಿವಿ ದಿನಕರನ್ ಬಣದ ಮುಖಂಡ ವೆಟ್ರಿವಲ್ ಹೇಳಿದ್ದಾರೆ.
https://www.facebook.com/659884920721116/videos/1694081797301418/