Select Your Language

Notifications

webdunia
webdunia
webdunia
Thursday, 13 March 2025
webdunia

ಟೆರರಿಸ್ಟ್ ಆಗುವಂತೆ ಒತ್ತಾಯ; ಯುವಕ ಆತ್ಮಹತ್ಯೆಗೆ ಯತ್ನ

ಟೆರರಿಸ್ಟ್ ಆಗುವಂತೆ ಒತ್ತಾಯ; ಯುವಕ ಆತ್ಮಹತ್ಯೆಗೆ ಯತ್ನ
ಬಾಗಲಕೋಟೆ , ಶನಿವಾರ, 16 ಡಿಸೆಂಬರ್ 2017 (14:23 IST)
ಬಾಗಲಕೋಟೆ; ಉಗ್ರರು ತನಗೆ ಟೆರರಿಸ್ಟ್ ಆಗುವಂತೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಶರಣಪ್ಪ ನಾಗರಾಳ ಎಂಬ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗಜೇಂದ್ರಗಢದಲ್ಲಿ ನಡೆದಿದೆ.


ಮೈಸೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಶರಣಪ್ಪ ನಾಗರಾಳ ಎಂಬಾತ, ತನಗೆ ಉಗ್ರರು ಟೆರರಿಸ್ಟ್ ಆಗುವಂತೆ ಒತ್ತಡ ಹೇರುತ್ತಿದ್ದಾರೆಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ.


ಟೆರರಿಸ್ಟ್ ಆಗುವಂತೆ ಹಾಗೂ ಕಾಲೇಜ್ ಗೆ ಬಾಂಬ್ ಇಡುವಂತೆ ಬೆದರಿಕೆ ಹಾಕುತ್ತಿದ್ದರು..ನಾನು ಟೆರಿರಿಸ್ಟ್ ಆಗಲ್ಲ ಎಂದು ಪತ್ರ ಬರೆದಿಟ್ಟು ಶರಣಪ್ಪ ನಿನ್ನೆ ಗಜೇಂದ್ರಗಢ ಬಳಿ ವಿಷ ಸೇವಿಸಿದ್ದ. ಬಳಿಕ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.  
ಶರಣಪ್ಪ ಹೇಳುತ್ತಿರುವುದು ಸುಳ್ಳು ಎಂದು ಆತನ ಕುಟುಂಬದವರು ಹೇಳಿದ್ದಾರೆ. ಶರಣಪ್ಪನಿಗೆ ಮಾನಸಿಕ ಅಸ್ವಸ್ಥತೆ ಇದ್ದು, ಆತನಿಗೆ ಯಾವುದೇ ಭಯೋತ್ಪಾದಕರ ಜತೆ ಸಂಪರ್ಕ ಇಲ್ಲ ಎಂದು ಗದಗ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯೋಗೇಶ್ ಗೌಡ ಪ್ರಕರಣ; ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತಪಡಿಸಿದ್ದ ಪತ್ನಿ ಮಲ್ಲಮ್ಮ