Select Your Language

Notifications

webdunia
webdunia
webdunia
webdunia

ಎಚ್.ಪಿ. ಲೋಯಾ ಸಾವಿನ ಪ್ರಕರಣ; ಉನ್ನತ ಮಟ್ಟದ ತನಿಖೆಗಾಗಿ ಪಟ್ಟು ಹಿಡಿದ ಸಿಪಿಎಂ

ಎಚ್.ಪಿ. ಲೋಯಾ ಸಾವಿನ ಪ್ರಕರಣ; ಉನ್ನತ ಮಟ್ಟದ ತನಿಖೆಗಾಗಿ ಪಟ್ಟು ಹಿಡಿದ ಸಿಪಿಎಂ
ನವದೆಹಲಿ , ಶುಕ್ರವಾರ, 24 ನವೆಂಬರ್ 2017 (06:39 IST)
ನವದೆಹಲಿ: ಸೊಹ್ರಾಬುದ್ದೀನ್ ಶೇಖ್ ಅವರ ಎನ್ ಕೌಂಟರ್ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿರುವಾಗಲೇ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚ್.ಪಿ.ಲೋಯಾ ಅವರು ಮೃತಪಟ್ಟಿದ್ದಾರೆ. ಅವರ ಸಾವು ಅಸಹಜವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಈ ಪ್ರಕರಣದ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಸಿಪಿಎಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.


ಸೊಹ್ರಾಬುದ್ದೀನ್ ಅವರ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಲೋಯಾ ಅವರಿಗೆ ಸಾಕಷ್ಟು ಬೆದರಿಕೆ, ಲಂಚದ ಆಮೀಷಗಳು ಬಂದಿವೆ ಎಂದು ಲೋಯಾ ಅವರ ಕುಟುಂಬದ ಸದಸ್ಯರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ  ಹೇಳಿದ್ದಾರೆ.


 ಇದನ್ನೆಲ್ಲಾ ಗಮನಿಸಿದರೆ ಲೋಯಾ ಅವರ ಸಾವು ಸಹಜವಾದದ್ದಲ್ಲ. ಅವರ ಸಾವು ಅನುಮಾನವನ್ನು ಮೂಡಿಸುತ್ತಿದೆ. ಹೀಗಾಗಿ ಸೂಕ್ತ ರೀತಿಯ ತನಿಖೆ ಆಗಬೇಕು ಎಂದು ಸಿಪಿಎಂ ಆಗ್ರಹ ಪಡಿಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಪಿಎಸ್-ಓಪಿಎಸ್ ಬಣಗಳಿಗೆ ಎರೆಡೆಲೆ ಚಿಹ್ನೆ: ಟಿಟಿಬಿ ದಿನಕರನ್‌ಗೆ ಮುಖಭಂಗ