ನಿಮ್ಮ ತಲೆಗೂದಲಿನ ಉತ್ತಮ ಆರೋಗ್ಯಕ್ಕಾಗಿ ಕೆಲವು ಸಲಹೆಗಳು...

Webdunia
ಮಂಗಳವಾರ, 5 ಜೂನ್ 2018 (16:16 IST)
ತಲೆ ಕೂದಲು ದಟ್ಟವಾಗಿ ಉದ್ದವಾಗಿದ್ದರೂ ಸಹ ಅದನ್ನು ಧೂಳು, ಬೆವರಿನಿಂದ ಕಾಪಾಡಿಕೊಳ್ಳುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ನಮ್ಮ ಕೂದಲ ಉತ್ತಮ ಆರೋಗ್ಯವನ್ನು ಕಾಪಾಡಲು ನಾವು ನಿರ್ವಹಿಸುವ ಚಿಕ್ಕ ಪುಟ್ಟ ನಿಯಮಗಳೇ ಸಾಕಾಗುತ್ತದೆ. ಉತ್ತಮ ಕೂದಲ ಆರೋಗ್ಯಕ್ಕಾಗಿ ನಮ್ಮ ದಿನದ ಸಮಯದಲ್ಲಿ ಸ್ವಲ್ಪೇ ಸ್ವಲ್ಪ ಸಮಯವನ್ನು ನಾವು ಕೂದಲಿಗಾಗಿ ನೀಡಿದರೆ ಸಾಕು. ನಿಮಗಾಗಿ ಕೆಲವು ಸಲಹೆಗಳು:
* ಬಿಸಿಲಿನಲ್ಲಿ ಕೂದಲು ಒಣಗಿ ಕೂದಲ ತುದಿ ಸೀಳು ಬಿಡುತ್ತದೆ. ಇನ್ನು ಬಣ್ಣ ಮಾಡಿರುವ ಕೂದಲಿನ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತದೆ. ಆದ್ದರಿಂದ ಬಿಸಿಲಿನಲ್ಲಿರುವಾಗ ಸಾಧ್ಯವಾದಾಗಲೆಲ್ಲಾ ಟೋಪಿ ಅಥವಾ ಸ್ಕಾರ್ಫ್ ಅನ್ನು ಬಳಸಿ.
 
* ಬೀಚ್ ಅಥವಾ ಪೂಲ್‌ನಲ್ಲಿ ಈಜುವಾಗ ತಲೆಗೆ ಯಾವಾಗಲೂ ಸ್ವಿಮ್ಮಿಂಗ್ ಕ್ಯಾಪ್ ಹಾಕಿಕೊಂಡಿರಿ. ಕ್ಲೋರಿನ್ ಅಥವಾ ಉಪ್ಪುನೀರಿನ ಪರಿಣಾಮದಿಂದ ನಿಮ್ಮ ಕೂದಲು ಹಾನಿಗೊಳಗಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಈಜು ಕೊಳದಲ್ಲಿ ಇಳಿಯುವ ಮೊದಲು ತಲೆಯನ್ನು ಒದ್ದೆಯಾಗಿಸಿ ಕೂದಲಿಗೆ ಒಳ್ಳೆಯ ಕಂಡೀಷನರ್ ಅನ್ನು ಹಚ್ಚಿಕೊಳ್ಳಿ.
 
* ಸಾಧ್ಯವಾದಾಗಲೆಲ್ಲಾ ಕೂದಲನ್ನು ಜಡೆ ಹಾಕಿಕೊಳ್ಳುವುದು ಒಳ್ಳೆಯದು. ಬಿಸಿಲಿನಲ್ಲಿರುವಾಗ ಅಥವಾ ತುಂಬಾ ಸೆಕೆಯಿರುವಾಗ ತಲೆಯು ಬೆವರಿ ಅದರಿಂದ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳಬಹುದಾಗಿದೆ. ಆದ್ದರಿಂದ ಸಾಧ್ಯವಾದಾಗಲೆಲ್ಲಾ ಕೂದಲನ್ನು ಸೇರಿಸಿ ಬ್ಯಾಂಡ್ ಹಾಕಿಕೊಳ್ಳಿ ಅಥವಾ ಸಡಿಲವಾಗಿ ಜಡೆಯನ್ನು ಹಾಕಿಕೊಳ್ಳಿ.
 
* ಕೂದಲನ್ನು ಬ್ಯಾಂಡ್ ಮಾಡಲು ಸಾಧ್ಯವಾದಷ್ಟು ಮೃದುವಾದ ಮತ್ತು ಒಳ್ಳೆಯ ಗುಣಮಟ್ಟದ ರಬ್ಬರ್ ಬ್ಯಾಂಡ್ ಅನ್ನು ಬಳಸಿ. ಇದರಿಂದ ಕೂದಲಿಗೆ ಬ್ಯಾಂಡ್ ಅಂಟಿಕೊಂಡು ಅಥವಾ ಸಿಕ್ಕಿಕೊಂಡು ಕೂದಲು ಹಾನಿಗೊಳಗಾಗುವುದು ತಪ್ಪುತ್ತದೆ.
 
* ಹಲವು ಜನರು ನೆತ್ತಿಯ ಆರೈಕೆಯನ್ನು ಮಾಡಲು ಮರೆತುಬಿಡುತ್ತಾರೆ. ವಾರಕ್ಕೊಮ್ಮೆಯಾದರೂ ಕೂದಲ ಬುಡಕ್ಕೆ ಸ್ವಲ್ಪ ಬೆಚ್ಚಗಿನ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿಕೊಳ್ಳುತ್ತಿರಬೇಕು. ಇದರಿಂದ ರಕ್ತದ ಹರಿವು ಉತ್ತೇಜನಗೊಂಡು ಕೂದಲು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
 
* ಹೇರ್ ಡ್ರೈಯರ್ ಮತ್ತು ಫ್ಲ್ಯಾಟ್ ಐರನ್ ನಂತಹ ಉಪಕರಣಗಳನ್ನು ಕೂದಲಿಗೆ ಆದಷ್ಟು ಕಡಿಮೆ ಬಳಸಿ. ಕೂದಲು ಒದ್ದೆಯಾಗಿರುವಾಗ ಯಾವ ಕಾರಣಕ್ಕೂ ಫ್ಲ್ಯಾಟ್ ಐರನ್ ಅನ್ನು ಬಳಸಬೇಡಿ. ಅದು ಕೂದಲಿಗೆ ಹೆಚ್ಚಿನ ಪ್ರಮಾಣದ ಹಾನಿಯನ್ನು ಉಂಟುಮಾಡುತ್ತದೆ.
 
* ಕೂದಲನ್ನು ಸತತವಾಗಿ ಬಾಚುತ್ತಿರಿ. ಒದ್ದೆ ಕೂದಲನ್ನು ಬಾಚಿಕೊಳ್ಳಲು ಯಾವಾಗಲೂ ಅಗಲ ಬಾಯಿಯ ಬಾಚಣಿಗೆಯನ್ನೇ ಬಳಸುವುದು ಉತ್ತಮ.
 
* ತಲೆ ಸ್ನಾನಕ್ಕೆ ಯಾವಾಗಲೂ ಉಗುರು ಬೆಚ್ಚಗಿನ ನೀರನ್ನೇ ಬಳಸುವುದು ಉತ್ತಮ. ಕೂದಲಿನಲ್ಲಿರುವ ಎಣ್ಣೆಯ ಅಂಶ ಹೋಗುವವರೆಗೂ 2-3 ಬಾರಿ ಶ್ಯಾಂಪೂ ಬಳಸಿ ಚೆನ್ನಾಗಿ ತೊಳೆದುಕೊಳ್ಳಿ.
 
* ಯಾವಾಗಲೂ ಕೂದಲ ತುದಿಯನ್ನು ಸ್ವಲ್ಪ ಕತ್ತರಿಸುತ್ತಿರುವುದರಿಂದ ಕೂದಲು ತುದಿಯಲ್ಲಿ ಸೀಳು ಬಿಟ್ಟು ಅಂದಗೆಡುವುದನ್ನು ತಪ್ಪಿಸಬಹುದು.
 
* ಕಬ್ಬಿಣ ಮತ್ತು ಪ್ರೋಟೀನ್ ಅಂಶ ಹೆಚ್ಚಾಗಿರುವ ಆಹಾರವನ್ನು ನಿಯಮಿತವಾಗಿ ಸೇವಿಸಿ. ಸಾಕಷ್ಟು ತರಕಾರಿಗಳನ್ನು ನಿಮ್ಮ ಆಹಾರ ವಿಧಾನದಲ್ಲಿ ಸೇರಿಸಿಕೊಂಡರೆ ಅದು ನಿಮ್ಮ ಕೂದಲ ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
 
ಈ ಮೇಲಿನ ಸಲಹೆಗಳನ್ನು ಪಾಲಿಸಿ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments