Select Your Language

Notifications

webdunia
webdunia
webdunia
webdunia

ಆರೋಗ್ಯಕ್ಕೆ ಬಹಳ ಉಪಯೋಗಕಾರಿ ಈ ಮಸಾಲ ಪದಾರ್ಥ

ಆರೋಗ್ಯಕ್ಕೆ ಬಹಳ ಉಪಯೋಗಕಾರಿ ಈ ಮಸಾಲ ಪದಾರ್ಥ
ಬೆಂಗಳೂರು , ಸೋಮವಾರ, 4 ಜೂನ್ 2018 (06:21 IST)
ಬೆಂಗಳೂರು : ಜಾಯಿಕಾಯಿಯಷ್ಟು ಪ್ರಯೋಜನಕಾರಿಯಾದ ಆಹಾರ ಉತ್ಪನ್ನ ಅಥವಾ ಮಸಾಲಾ ಪದಾರ್ಥದಂತಹ ಉತ್ಪನ್ನ ಮತ್ತೊಂದಿಲ್ಲ. ಇದು ದೇಹಕ್ಕೆ ಹಲವು ಲಾಭಗಳನ್ನ ನೀಡುತ್ತದೆ. ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿಯಾಗಿರುವುದರಿಂದಲೇ ಇದನ್ನ ಸಾಂಬಾರ್ ಪುಡಿ ತಯಾರಿಕೆಯಲ್ಲಿ ಬಳಸುತ್ತಾರೆ. ಇದರಲ್ಲಿರುವ ಇನ್ನು ಹಲವು ಉಪಯೋಗಗಳು ಇಲ್ಲಿವೆ.

* ಮೂತ್ರ ಪಿಂಡವನ್ನು ರಕ್ಷಿಸುತ್ತದೆ : ಇದು ಅನೇಕ ಮೂತ್ರಪಿಂಡದ ಸೋಂಕುಗಳ ವಿರುದ್ಧ ಹೋರಾಡುತ್ತದೆ ಮತ್ತು ಮೂತ್ರಪಿಂಡದ ಕಲ್ಲುಗಳಿಂದ ನೀವು ನರಳುತ್ತಿದ್ದರೆ, ಇದು ಆ ಕಲ್ಲುಗಳನ್ನು ಕರಗಿಸುವುದು ಮಾತ್ರವಲ್ಲದೆ ಮುಂದೆ ಅವುಗಳನ್ನು ಬೆಳೆಯದಂತೆ ತಡೆಯುತ್ತದೆ.

* ರಕ್ತಸಂಚಲನೆ ಹೆಚ್ಚಿಸುತ್ತದೆ : ಇದು ರಕ್ತ ಸಂಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡುತ್ತದೆ. ರಕ್ತ ಸಂಚಲನೆ ವರ್ಧನೆ ಮಧುಮೇಹ ತಡೆಗಟ್ಟುವಲ್ಲಿ ಮತ್ತು ಇತರ ಮಾರಕ ರೋಗಗಳು ಹಾಗೂ ಸೋಂಕುಗಳಿಂದ ವ್ಯಕ್ತಿಯನ್ನು ಕಾಪಾಡುವಲ್ಲಿ ನೆರವಾಗುತ್ತದೆ. 

* ಶೀತ ಮತ್ತು ಕೆಮ್ಮು : ಶೀತ ನಿವಾರಣ ಲೇಪನಗಳಲ್ಲಿ ಮತ್ತು ಕೆಮ್ಮು ಸಿರಪ್‌ಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಇದು ಜ್ವರ ಮತ್ತು ಅನೇಕ ವೈರಲ್ ರೋಗಗಳಿಂದ ದೇಹವನ್ನು ರಕ್ಷಿಸುವಲ್ಲಿ ಸಾಕಷ್ಟು ಉಪಯುಕ್ತವಾಗಿದೆ.

*ಜೀರ್ಣ ಕ್ರಿಯೆ : ವಾಯು ಸಂಬಂಧಿತ ಸಮಸ್ಯೆಗಳು, ಮಲಬದ್ಧತೆ ಮತ್ತು ಉಬ್ಬರಿಸುವುವಿಕೆ ಮುಂತಾದವುಗಳ ವಿರುದ್ಧ ಇದು ಹೋರಾಡಿ ಪಚನ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಇಡುವಲ್ಲಿ ಸಹಾಯಕವಾಗಿದೆ.

* ಹಸಿವನ್ನು ಹೆಚ್ಚಿಸುತ್ತದೆ : ನಿಮಗೆ ನಿರ್ದಿಷ್ಟ ದಿನದಂದು ಏನನ್ನಾದರೋ ತಿನ್ನಬೇಕು ಅನಿಸದೇ ಇದ್ದಲ್ಲಿ ಅಥವಾ ಆರೋಗ್ಯ ಸರಿಯಿಲ್ಲದೇ ಇದ್ದಲ್ಲಿ, ಈ ಮಸಾಲೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ ನಂತರ ಅದರ ಪರಿಣಾಮ ನೋಡಿ. ಈ ಮಸಾಲೆ ನಿಮ್ಮನ್ನು ಫಿಟ್ ಆಗಿ ಇರಿಸುವುದಲ್ಲದೆ, ನೀವು ನಿಮ್ಮ ಊಟದ ಸಮಯದಲ್ಲಿ ಹೆಚ್ಚು ತಿನ್ನಲು ಸಹಾಯಮಾಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ನಿಮಗೆ ರೋಗ ತರುವಂತಹ ನಿಮ್ಮ ದೇಹದ ಕೆಲವು ಭಾಗಗಳು ಯಾವುದು ಗೊತ್ತಾ?