ಬೆಂಗಳೂರು : ಕೆಲವರಿಗೆ ಎಷ್ಟು ತಿಂದರೂ ಸ್ವಲ್ಪ ಹೊತ್ತಲೇ ಹಸಿವಾಗಲು ಶುವಾಗುತ್ತದೆ. ಆಗ ಅವರು ಪದೇ ಪದೇ ಊಟವನ್ನೇ ಮಾಡುವುದರಿಂದ ತುಂಬಾ ದಪ್ಪ ಕೂಡ ಆಗಬಹುದು. ಅಂತವರು ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಇವು ಅವರಿಗೆ ಪದೇ ಪದೇ ಹಸಿವಾಗುವುದನ್ನು ತಡೆಯುತ್ತವೆ.
ಪಾಪ್ ಕಾರ್ನ್ : ಇಡೀ ಧಾನ್ಯದಿಂದ ಮಾಡಲ್ಪಡುವಂತಹ ಪಾಪ್ ಕಾರ್ನ್ ದೀರ್ಘಕಾಲದ ತನಕ ಹೊಟ್ಟೆಯು ತುಂಬಿರುವಂತೆ ಮಾಡುವುದು. ಆದರೆ ಇದಕ್ಕೆ ಚೀಸ್ ಮತ್ತು ಹೆಚ್ಚು ಉಪ್ಪು ಹಾಕದಂತೆ ನೋಡಿಕೊಳ್ಳಿ
ನೆಲಗಡಲೆ ಬೆಣ್ಣೆ : ನೆಲಗಡಲೆ ಬೆಣ್ಣೆಯಲ್ಲಿ ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲ ಮತ್ತು ಆರೋಗ್ಯಕಾರಿ ಕಾರ್ಬ್ರೋಹೈಡ್ರೇಟ್ಸ್ ಗಳು ಇರುವ ಕಾರಣದಿಂದ ದೇಹವು ಫಿಟ್ ಆಗಿರಬೇಕೆಂದು ಬಯಸುವವರು ಇದನ್ನು ಬಳಸುವರು. ನೆಲಗಡಲೆ ಬೆಣ್ಣೆಯು ಹೊಟ್ಟೆ ತುಂಬುವಂತೆ ಮಾಡಿ ನೈಸರ್ಗಿಕವಾಗಿ ಹಸಿವು ನೀಗಿಸುವುದು. ದಿನದಲ್ಲಿ ಒಂದು ಅಥವಾ ಎರಡು ಚಮಚ ಹಾಗೆ ತಿನ್ನಬೇಕು.
ಪಿಸ್ತಾ : ಪಿಸ್ತಾವು ತುಂಬಾ ರುಚಿಕರವಾಗಿರುವುದು ಮಾತ್ರವಲ್ಲದೆ, ಇದು ನೈಸರ್ಗಿಕವಾಗಿ ಹಸಿವು ನಿವಾರಣೆ ಮಾಡುವುದು. ಇದನ್ನು ತಿಂದಾಗ ಅದು ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸುವುದು
ಮೊಸರು : ಮೊಸರನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದು ಹೊಟ್ಟೆಯ ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲದೆ, ಒಳ್ಳೆಯ ಬ್ಯಾಕ್ಟೀರಿಯಾ ಹೆಚ್ಚಿಸುವುದು. ಇದು ಯೋನಿಯ ಆರೋಗ್ಯವನ್ನು ಕೂಡ ಸುಧಾರಿಸುವುದು. ಇದು ಹೊಟ್ಟೆಯಲ್ಲಿರುವ ಆಮ್ಲವನ್ನು ತಟಸ್ಥಗೊಳಿಸುವುದು. ಇದರಿಂದ ಪದೇ ಪದೇ ಹಸಿವಾಗುವುದು ತಪ್ಪುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ