Select Your Language

Notifications

webdunia
webdunia
webdunia
webdunia

ಈ ಪದಾರ್ಥಗಳು ನಿಮ್ಮ ಮುಖದಲ್ಲಿ ಮೊಡವೆಗಳು ಬಾರದಂತೆ ತಡೆಗಟ್ಟುತ್ತವೆಯಂತೆ!

ಈ ಪದಾರ್ಥಗಳು ನಿಮ್ಮ ಮುಖದಲ್ಲಿ ಮೊಡವೆಗಳು ಬಾರದಂತೆ ತಡೆಗಟ್ಟುತ್ತವೆಯಂತೆ!
ಬೆಂಗಳೂರು , ಶುಕ್ರವಾರ, 6 ಏಪ್ರಿಲ್ 2018 (07:12 IST)
ಬೆಂಗಳೂರು : ಚರ್ಮದ ರಕ್ಷಣೆಗೆಂದು ಕೇವಲ ಫೆಸ್ ಪ್ಯಾಕ್ ಗಳು, ವಿವಿಧ ಬಗೆಯ ಕ್ರೀಮ್ ಗಳನ್ನು ಉಪಯೋಗಿಸಿದರೆ ಸಾಲದು. ಆರೋಗ್ಯಕರವಾದ ಆಹಾರವನ್ನು ಸೇವುಸುವುದೂ ಬಹಳ ಮುಖ್ಯ. ಕೆಲವು ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಮೊಡವೆಗಳು ಬರದಂತೆ ತಡೆಯಬಹುದು. ಇಷ್ಟಕ್ಕೂ ಆ ಪದಾರ್ಥಗಳು ಯಾವುವೆಂದು ತಿಳಿದುಕೊಳ್ಳಬೇಕಾ...?


ಬಸಳೆ ಸೊಪ್ಪು: ಚರ್ಮದೊಳಗೆ ಅಡಗಿ ಕುಳಿತಿರುವ ಬ್ಯಾಕ್ಟೀರಿಯಾ ಹಾಗು ಇತರೆ ಕ್ರಿಮಿಗಳು ಹೊರಗೆ ಬರುವುದರಿಂದ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ರಕ್ತದಲ್ಲಿನ ಬ್ಯಾಕ್ಟೀರಿಯಾ ಹಾಗೂ ಕ್ರಿಮಿಗಳನ್ನು ನಾಶ ಪಡಿಸುವ ಕ್ಲೋರೋಫಿಲ್ ಅಂಶ ಬಸಳೆ ಸೊಪ್ಪಿನಲ್ಲಿದೆ. ವಿಟಮಿನ್ -ಎ ಸಹ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಮೊಡವೆಗಳ ವಿರುದ್ಧ ಹೋರಾಡುತ್ತದೆ


ಅರಶಿನ : ಚರ್ಮದ ಉರಿಯನ್ನು ಕಡಿಮೆಗೊಳಿಸುತ್ತದೆ ಹಾಗೂ ಕಾಂತಿಯನ್ನು ಹೆಚ್ಚಿಸುತ್ತದೆ. ಸಹಜವಾಗಿಯೆ ಆಂಟಿಬಯಾಟಿಕ್ ಗುಳವುಳ್ಳ ಅರಶಿನವನ್ನು ಯಾವುದೊ ಒಂದು ವಿಧದಲ್ಲಿ ಪ್ರತೀ ದಿನ ಅರ್ಧಚಮಚ ಉಪಯೋಗಿಸುತ್ತಿದ್ದರೆ, ರಕ್ತದಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.


ಕ್ಯಾರೆಟ್ : ಇದರಲ್ಲಿ ವಿಟಮಿನ್-ಎ, ಬೀಟಾ ಕೆರೋಟಿನ್ ರೂಪದಲ್ಲಿ ಹೇರಳ ವಾಗಿರುತ್ತದೆ. ಇದು ಮೊಡವೆಗಳು ಬರಲು ಕಾರಣವಾದ ಕ್ರಿಮಿಗಳನ್ನು ನಾಶಗೊಳಿಸುತ್ತವೆ. ಪ್ರತೀದಿನ ಕನಿಷ್ಟ ಒಂದು ಕ್ಯಾರೆಟ್ ಸೇವಿಸಿದಲ್ಲಿ ಮೊಡವೆಗಳು ಬರದಂತೆ ನೋಡಿಕೊಳ್ಳ ಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ಟ್ ಆಟ್ಯಾಕ್ ಹೆಚ್ಚಾಗಿ ಮಧ್ಯರಾತ್ರಿಯಲ್ಲಿ ಕಂಡುಬರಲು ಇದೇ ಕಾರಣವಂತೆ!