Publish Date: Wed, 04 Apr 2018 (14:22 IST)
Updated Date: Wed, 04 Apr 2018 (14:26 IST)
ಬೆಂಗಳೂರು : ‘ಕಾವೇರಿ ವಿಚಾರವಾಗಿ ಪ್ರಾಣತ್ಯಾಗ ಮಾಡುತ್ತೇವೆಂದು ತಮಿಳುನಾಡು ಸಂಸದರು ಲೋಕಸಭೆಯಲ್ಲಿ ಎಚ್ಚರಿಕೆ ಕೊಡುತ್ತಾರೆ’ ಎಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ತಮಿಳುನಾಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ದೇವೆಗೌಡರು,’ಕನ್ನಡಿಗರನ್ನು ಇದು ಕೆರಳಿಸುವ ಪ್ರಯತ್ನವೇ? ನಮಗೇನು ಹೀಗೆ ಹೋರಾಟ ಮಾಡಲು ಬರುವುದಿಲ್ಲವೇ? ಪ್ರಚೋದನೆ ಮಾಡುವುದೇ ನಿಮ್ಮ ಉದ್ದೇಶವೇ? ಸಮಸ್ಯೆ ಪರಿಹಾರಕ್ಕಾಗಿ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
‘ರಾಜ್ಯದ ಜನ ಕಾವೇರಿ ವಿಷಯದಲ್ಲಿ ನೋವು ಅನುಭವಿಸಿದ್ದಾರೆ. ಕುಳಿತು ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ನಮ್ಮ ಜನರಿಗೆ ಕುಡಿಯುವ ನೀರು ಸಿಗಬೇಕು ಅಷ್ಟೇ. ಟ್ರಬ್ಯೂನಲ್ ನಲ್ಲಿ ನಮಗೆ ಸಾಕಷ್ಟುಅನ್ಯಾಯವಾಗಿದೆ. ತಮಿಳುನಾಡು ಸರ್ಕಾರ ಧರಣಿ, ಸತ್ಯಾಗ್ರಹ ಮಾಡುವ ಮೂಲಕ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದೆ. 20 ಸಂಸದರಾದರು ನನ್ನಬೆಂಬಲಕ್ಕೆ ನಿಂತರೆ ಹೋರಾಟ ಮಾಡಬಹುದು’ ಎಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ