Publish Date: Wed, 04 Apr 2018 (12:11 IST)
Updated Date: Wed, 04 Apr 2018 (12:12 IST)
ಬೆಂಗಳೂರು: ದೇವೇಗೌಡ ಮತ್ತು ಮಕ್ಕಳನ್ನು ಸೋಲಿಸಿ ಎಂದು ಕರೆಕೊಟ್ಟಿರುವ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ-ಪುತ್ರ ಯತೀಂದ್ರರನ್ನು ಜನರೇ ಮನೆಗೆ ಕಳುಹಿಸ್ತಾರೆ ಎಂದಿದ್ದಾರೆ.
‘ನಾನು ಸಿಎಂ ರೀತಿ ಮಾತನಾಡಲ್ಲ. ಜನರ ನಿರ್ಧರಿಸುತ್ತಾರೆ. ಅಪ್ಪ-ಮಗನನ್ನು ಜನರೇ ಮನೆಗೆ ಕಳುಹಿಸ್ತಾರೆ’ ಎಂದು ಮೈಸೂರಿನಲ್ಲಿ ಸುದ್ದಿಗಾರರ ಮುಂದೆ ಕುಮಾರಸ್ವಾಮಿ ಹೇಳಿದ್ದಾರೆ.
ಇದೇ ವೇಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೂರು ದಿನ ಪ್ರವಾಸ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ. ನಾನು ಸಿದ್ದರಾಮಯ್ಯ ರೀತಿ ಐದೂ ದಿನ ಪ್ರಚಾರ ಮಾಡಲ್ಲ. ಮೂರು ದಿನ ಪ್ರಚಾರಕ್ಕೆ ಹೋಗುವೆ. ದೇವೇಗೌಡರ ಪ್ರವಾಸದ ಸಮಯ ಇನ್ನೂ ನಿಗದಿಯಾಗಿಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ