Select Your Language

Notifications

webdunia
webdunia
webdunia
webdunia

ಸಿಎಂರಿಂದ ಲಕ್ಷ ಲಕ್ಷ ರೂ ನೀಡಿ ಗ್ರಾ.ಪಂ ಸದಸ್ಯರ ಖರೀದಿ: ಬಿಜೆಪಿ

ಸಿಎಂರಿಂದ ಲಕ್ಷ ಲಕ್ಷ ರೂ ನೀಡಿ ಗ್ರಾ.ಪಂ ಸದಸ್ಯರ ಖರೀದಿ: ಬಿಜೆಪಿ
ಮೈಸೂರು , ಮಂಗಳವಾರ, 3 ಏಪ್ರಿಲ್ 2018 (13:33 IST)
ಸಿಎಂ ಸಿದ್ದರಾಮಯ್ಯ ಲಕ್ಷ ಲಕ್ಷ ಹಣ ನೀಡಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಖರೀದಿಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ.  
ಮೈಸೂರಿನಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಗಂಭೀರ ಆರೋಪ ಮಾಡಿದ್ದು, ಸಿದ್ದರಾಮಯ್ಯ ರೆಸಾರ್ಟ್ ನಲ್ಲಿ ಕುಳಿತು ಏನೇನ್ ಮಾಡಿದ್ರು ಅಂತ ಗೊತ್ತಾಗಿದೆ.ಗ್ರಾಮ ಪಂಚಾಯಿತಿ ಸದಸ್ಯರಿಗೆ ಲಕ್ಷಾಂತರ ರೂ. ನೀಡಿ ಖರೀದಿ ಮಾಡುತ್ತಿದ್ದಾರೆ. ಹಣ ಹಂಚೋದು ಚುನಾವಣೆಯ ಒಂದು ಭಾಗ. ಹಣದಿಂದಲೇ ಚುನಾವಣೆ ಗೆಲ್ಲೋದಿಕ್ಕೆ ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.‌
 
ಸಿದ್ದರಾಮಯ್ಯ ಅವರನ್ನು ಸೋಲಿಸೋದು ನನ್ನ ಗುರಿ ಅಂತ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಹೇಗೆ ಸೋಲಿಸುತ್ತೇವೆ ಅಂತ ಹೇಳೋಕಾಗುತ್ತ ?ಚಾಮುಂಡೇಶ್ವರಿ ಕ್ಷೇತ್ರದ ರಣತಂತ್ರದ ಗುಟ್ಟು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.
 
ಬಿಜೆಪಿ ರಾಷ್ಟ್ರೀಯ ಪಕ್ಷ. ನಾವು ಅಭ್ಯರ್ಥಿ ಹಾಕಲೇ ಬೇಕಾಗುತ್ತೆ‌. ಅಭ್ಯರ್ಥಿ ಹಾಕುತ್ತೇವೆ. ಯಾರು ಗೆಲ್ಲುತ್ತಾರೆ ಅಂತ ಈಗ ಹೇಳಲು ಸಾಧ್ಯವೇ ?ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಪ್ರಶ್ನಿಸಿದ್ದಾರೆ.
 
ವರುಣ ಕ್ಷೇತ್ರಕ್ಕೆ ವಿಜಯೇಂದ್ರ ಅಲ್ಲ, ಅವರಪ್ಪ ಬರಲಿ ಎಂಬ ಸಿಎಂ ಹೇಳಿಕೆ ವಿಚಾರ. ಒಬ್ಬ ಮುಖ್ಯಮಂತ್ರಿ ಬಳಸುವ ಭಾಷೆಯೇ ಅದು ?ಚುನಾವಣೆ ಅಂತ ಮೇಲೆ ಯಾರಾದರೂ ಸ್ಪರ್ಧಿಸಲಿ ಅಂತ ಹೇಳಬಹುದಿತ್ತು. 
 
ಆದ್ರೆ ಸಿದ್ದರಾಮಯ್ಯ ಮಾತೆತ್ತಿದರೆ ಅವರಪ್ಪ ಬರಲಿ, ಅವರಮ್ಮ ಬರಲಿ, ಅವರಪ್ಪನಾಣೆ ಗೆಲ್ಲೋದಿಲ್ಲ ಎನ್ನುವ ಪದ ಬಳಕೆ ಮಾಡ್ತಾರೆ. ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಹಾವ ಭಾವವೇ ಮುಳುವಾಗುತ್ತೆ. ಮೈಸೂರಿನಲ್ಲಿ ಮಾಜಿ‌ ಸಚಿವ ವಿ. ಶ್ರೀನಿವಾಸ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲಿ ಚುರುಕುಗೊಂಡ ಚುನಾವಣಾ ಭದ್ರತಾ ಕಾರ್ಯ