Select Your Language

Notifications

webdunia
webdunia
webdunia
webdunia

ಕರಬೂಜ ಹಣ್ಣನ್ನು ಸೇವಿಸುವುದರಿಂದ ಈ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದೆಯಂತೆ!

ಕರಬೂಜ ಹಣ್ಣನ್ನು ಸೇವಿಸುವುದರಿಂದ ಈ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದೆಯಂತೆ!
ಬೆಂಗಳೂರು , ಶನಿವಾರ, 2 ಜೂನ್ 2018 (06:26 IST)
ಬೆಂಗಳೂರು : ಕರಬೂಜ ಹಲವು ಸಮಸ್ಯೆಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ನಾವು ಇದರ ಸೇವನೆಯನ್ನು ಮಾಡುವುದು ಉತ್ತಮ ಇದರಿಂದ ದೇಹಕ್ಕೆ ಹಲವು ಲಾಭಗಳು ಲಭಿಸಲಿವೆ.


*ಕರಬೂಜದಲ್ಲಿ ಪಿಟೋಕೆಮಿಕಲ್ಸ್ ಎನ್ನುವ ಪದಾರ್ಥ ಇದೆ. ಈ ಪದಾರ್ಥಕ್ಕೆ ಉರಿಯೂತದ ವಿರುದ್ಧ ಹೊರಡುವ ಸಾಮರ್ಥ್ಯವಿದೆ. ಇದನ್ನ ತಿನ್ನುವುದರಿಂದ ಮೊಣಕೈ, ಮೊಣಕಾಲು ದೇಹದಲ್ಲಿರೋ ಸಂದಿಗಳಲ್ಲಿ ಬರುವ ನೋವು ಕಡಿಮೆಯಾಗುತ್ತದೆ. ಕರಬೂಜ ಹಣ್ಣು ತಿನ್ನುವುದರಿಂದ ಸಂದಿವಾತ ಬರುವುದನ್ನ ಸಹ ತಡೆಯಬಹುದು.


*ಕರಬೂಜದಲ್ಲಿ ರೋಗ ನೀರೋದಕ ಶಕ್ತಿ ಹೇರಳವಾಗಿದೆ ಇದರಲ್ಲಿರುವಂತಹ ರೋಗ ನಿರೋಧಕ ಶಕ್ತಿಯು ನಮ್ಮ ಆರೋಗ್ಯದ ಮೇಲೆ ಆಗುವ ಕೆಟ್ಟ ಪರಿಣಾಮಗಳನ್ನ ತಡೆಯುತ್ತದೆ


*ಕರ್ಬುಜವು ನಮ್ಮ ದೇಹದಲ್ಲಿರುವ ವಿಷದ ಅಂಶಗಳು ಹೊರಗೆ ಹೋಗಲು ಸಹಾಯ ಮಾಡುತ್ತದೆ ಇದರಿಂದ ಕ್ಯಾನ್ಸರ್ ತಡೆಗಟ್ಟಬಹುದು ಹಾಗೂ ಇದರಲ್ಲಿ ಕ್ಯನಾಸರ್ನ ವಿರುದ್ಧ ಹೊರಡುವ ಶಕ್ತಿ ಇದೆ.


*ರಕ್ತದ ಒತ್ತಡ ಹೆಚ್ಚಾಗಿದ್ದರೆ ಮಾನಸಿಕ ಒತ್ತಡವು ಹೆಚ್ಚಾಗುತ್ತದೆ. ಆದರೆ ಕರಬೂಜದಲ್ಲಿರುವ ಪೊಟ್ಯಾಸಿಯಮ್ ಅಂಶ ರಕ್ತನಾಳಗಳು ಸಡಿಲಗೊಂಡು ರಕ್ತ ಹಾಗೂ ಆಮ್ಲಜನಕ ಸರಾಗವಾಗಿ ಚಲಿಸುವ ಹಾಗೆ ಮಾಡಿ ರಕ್ತದಒತ್ತಡವನ್ನ ಕಡಿಮೆ ಆಗುವ ಹಾಗೆ ಮಾಡುತ್ತದೆ. ಈ ಕರಬೂಜದಲ್ಲಿರುವ ಎಲ್ಲಾ ಗುಣಗಳು ನಮ್ಮ ದೇಹದ ಒತ್ತಡವನ್ನ ಕಡಿಮೆ ಮಾಡುತ್ತವೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕರವಾದ ಖರ್ಜೂರದ ಪಾಯಸ ಸವಿದಿದ್ದೀರಾ…?