Select Your Language

Notifications

webdunia
webdunia
webdunia
webdunia

ಹಲವು ಕಾಯಿಲೆಗೆ ಮದ್ದಾಗಿದೆ ಈ ಮರದ ಎಲೆ

ಹಲವು ಕಾಯಿಲೆಗೆ ಮದ್ದಾಗಿದೆ ಈ ಮರದ ಎಲೆ
ಬೆಂಗಳೂರು , ಶುಕ್ರವಾರ, 1 ಜೂನ್ 2018 (06:21 IST)
ಬೆಂಗಳೂರು : ಹಲವು ಕಾಯಿಲೆಗಳಿಗೆ ನಮ್ಮ ಸುತ್ತ ಮುತ್ತಲಿನಲ್ಲಿಯೇ ಪರಿಹಾರವಿದ್ದರೂ ಕೂಡ ನಾವು ತಕ್ಷಣಕ್ಕೆ ಪರಿಹಾರ ಸಿಗಬೇಕೆಂಬ ಕಾರಣಕ್ಕೆ ರಾಸಾಯನಿಕ ಔಷಧಿಗಳ ಮೊರೆ ಹೋಗುತ್ತೇವೆ. ಆದರೆ ನಮ್ಮ ಸುತ್ತ ಮುತ್ತಲಿನ ಸಸ್ಯಗಳಲ್ಲಿಯೇ ಕೆಲವು ಕಾಯಿಲೆಗಳಿಗೆ ಪರಿಹಾರ ಅಡಗಿರುತ್ತದೆ. ಅದರಲ್ಲಿ ಅಶ್ವತ್ಥ ಮರವು ಒಂದು. ಈ ಅಶ್ವತ್ಥ ಮರದ ಎಲೆಯಲ್ಲಿ ಹಲವು ಕಾಯಿಲೆಗಳನ್ನ ಗುಣಪಡಿಸಬಹುದಾಗಿದೆ.


* ಸುಮಾರು ಹತ್ತು ಅಶ್ವತ್ಥ ಎಲೆಗಳನ್ನು ಎರಡು ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಅದನ್ನು ಒಂದು ಗ್ಲಾಸ್ ನೀರಿಗೆ ಬತ್ತಿಸಬೇಕು. ಈ ಕಷಾಯವನ್ನು ತಣಿಸಿ ಕುಡಿಯಬೇಕು. ಇದರಿಂದ ಹೃದಯ ಸಂಬಂಧಿ ಸಮಸ್ಯೆ ದೂರವಾಗುತ್ತದೆ.

* ಅಶ್ವತ್ಥ ಮರದ ತೊಗಟೆಯನ್ನು ಒಣಗಿಸಬೇಕು. ಚೆನ್ನಾಗಿ ಒಣಗಿದ ನಂತರ ಅದನ್ನು ಪುಡಿ ಮಾಡಬೇಕು. ಈ ಪುಡಿಯನ್ನು ನೀರಿಗೆ ಹಾಕಿ ಕುಡಿಯುವುದರಿಂದ ಅಸ್ತಮಾ ನಿವಾರಣೆಯಾಗುತ್ತದೆ.

* ಅಶ್ವತ್ಥ ಮರದ ತೊಗಟೆಯನ್ನು ಪುಡಿ ಮಾಡಿ ಹಲ್ಲು ಉಜ್ಜುವುದರಿಂದ ಹಲ್ಲುಗಳು ಸ್ಟ್ರಾಂಗ್ ಆಗುತ್ತವೆ. ಜತೆಗೆ ಹೊಳಪು ಕೂಡ ಬರುತ್ತದೆ. ಅಷ್ಟೇ ಅಲ್ಲ ಹಲ್ಲು ನೋವು ಸಹ ನಿವಾರಣೆಯಾಗುತ್ತದೆ.

* ಅಶ್ವತ್ಥ ಎಲೆಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಸಕ್ಕರೆ ಹಾಕಿ ಬೆಳಗ್ಗೆ ಮತ್ತು ರಾತ್ರಿ ಕುಡಿದರೆ ಶೀತ -ಕೆಮ್ಮು ನಿವಾರಣೆಯಾಗುತ್ತದೆ.
* ಅಶ್ವತ್ಥ ಎಲೆಯ ರಸಕ್ಕೆ ಸಕ್ಕರೆ ಹಾಕಿ ಕುಡಿದರೆ ಕಾಮಾಲೆ ಕಾಯಿಲೆಗೆ ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಿಗ್ಗಿನ ತಿಂಡಿಗೆ ರುಚಿಯಾದ ಹೆಸರುಬೇಳೆ ಕಿಚಡಿ!