Publish Date: Mon, 04 Jun 2018 (08:44 IST)
Updated Date: Mon, 04 Jun 2018 (08:46 IST)
ಬೆಂಗಳೂರು: ಸೆಕ್ಸ್ ಎನ್ನುವುದು ಎರಡು ದೇಹಗಳು ಒಂದಾಗುವುದು ಮಾತ್ರವಲ್ಲ ಮನಸ್ಸೂ ಒಂದಾಗುವ ಕ್ರಿಯೆ. ಇಲ್ಲವಾದರೆ ಎಲ್ಲವೂ ಯಾಂತ್ರಿಕವಾಗುತ್ತದೆ. ಹಾಗಿದ್ದರೂ ಕೆಲವರಿಗೆ ತಮ್ಮ ಸಾಮರ್ಥ್ಯದ ಬಗೆಗೇ ತಪ್ಪು ಕಲ್ಪನೆಗಳು ಅಥವಾ ಸಂಶಯಗಳಿರುತ್ತವೆ.
ಹಾಗಿದ್ದರೆ ಲೈಂಗಿಕವಾಗಿ ನೀವು ಸಮರ್ಥರು ಎನ್ನುವ ಆತ್ಮವಿಶ್ವಾಸ ಗಳಿಸುವುದು ಹೇಗೆ? ತಜ್ಞರು ಹೇಳುವ ಪ್ರಕಾರ ಸೆಕ್ಸ್ ಸುಮಧುರವಾಗಿರಬೇಕಾದರೆ ನಮ್ಮ ದೇಹ ಸೌಂದರ್ಯ ಮುಖ್ಯವಲ್ಲ. ನಾವು ನಮ್ಮ ಬಗ್ಗೆ ಎಂತಹ ಭಾವನೆ ಇಟ್ಟುಕೊಂಡಿದ್ದೇವೆ ಎನ್ನುವುದು ಮುಖ್ಯ.
ದೇಹ ಸಿರಿ ಇಲ್ಲ ಎಂದು ಕೊರಗುವ ಬದಲು ನಮ್ಮ ಬಗ್ಗೆ ನಮಗೆ ಆತ್ಮವಿಶ್ವಾಸವಿರಬೇಕು. ನಾನು ಸುಂದರವಾಗಿದ್ದೇನೆ ಎಂದು ನಮಗೆ ನಾವೇ ಅಂದುಕೊಂಡರೆ, ನಮ್ಮನ್ನು ನಾವೇ ಹೀರೋ ಅಂದುಕೊಂಡು, ಕೀಳರಿಮೆಯನ್ನು ದೂರವಿಟ್ಟು ಮುಂದುವರಿದರೆ ಸೆಕ್ಸ್ ನಲ್ಲಿ ನಾವೇ ಸೂಪರ್ ಪವರ್ ಗಳಾಗುತ್ತೇವೆ ಎಂದು ತಜ್ಞರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.