Publish Date: Sat, 24 Aug 2019 (08:52 IST)
Updated Date: Sat, 24 Aug 2019 (08:54 IST)
ಬೆಂಗಳೂರು: ಕೆಲವು ಮಹಿಳೆಯರು ಬೇರೆ ಬೇರೆ ಕಾರಣಕ್ಕೆ ತಮ್ಮ ದೇಹ ಸೌಂದರ್ಯದ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿರುತ್ತಾರೆ. ತನ್ನ ದೇಹ ಸೌಂದರ್ಯ ಲೈಂಗಿಕ ಕ್ರಿಯೆ ಸಂದರ್ಭ ತನ್ನ ಪತಿಗೆ ಇಷ್ಟವಾಗದೇ ಹೋದರೆ ಎಂಬ ಆತಂಕ.
ಬೆತ್ತಲೆಯಾಗಿದ್ದಾಗ ತನ್ನ ದೇಹ ಸಿರಿ ತನ್ನ ಸಂಗಾತಿಗೆ ಇಷ್ಟವಾಗದೇ ಹೋದರೆ ಎಂಬ ಭಯದಲ್ಲಿ ಕೆಲವರು ಲೈಂಗಿಕ ಕ್ರಿಯೆಗೇ ಹಿಂಜರಿಯುತ್ತಾರೆ! ಆದರೆ ಇದು ಮಾನಸಿಕ ಭಾವನೆಯಷ್ಟೇ. ಅಸಲಿಗೆ ಲೈಂಗಿಕ ಸುಖ ಪಡೆಯಲು ದೇಹ ಸೌಂದರ್ಯವೊಂದೇ ಮುಖ್ಯವಲ್ಲ. ಮೊದಲು ನಮ್ಮ ದೇಹದ ಬಗ್ಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಮುಖ್ಯ. ಚಿತ್ರಗಳಲ್ಲಿ ತೋರಿಸುವಂತೇ ನಿಜವಾಗಿಯೂ ದೇಹ ಸಿರಿ ಇರಬೇಕೆಂದಿಲ್ಲ. ಹೀಗಾಗಿ ಹೋಲಿಕೆ ಮಾಡಿಕೊಂಡು ಕೀಳರಿಮೆ ಪಟ್ಟುಕೊಳ್ಳುವುದನ್ನು ನಿಲ್ಲಿಸುವುದು ಒಳ್ಳೆಯದು.