ರುಚಿಯಾದ ಬಟರ್ ಚಿಕನ್

Webdunia
ಗುರುವಾರ, 23 ಜುಲೈ 2020 (08:51 IST)
ಬೆಂಗಳೂರು : ಬಟರ್ ಚಿಕನ್ ರೊಟ್ಟಿ, ಚಪಾತಿ ತಿನನ್ಲು ಚೆನ್ನಾಗಿರುತ್ತದೆ. ಹೋಟೆಲ್ ನಲ್ಲಿ ಒಂದಷ್ಟು  ದುಡ್ಡು ಕೊಟ್ಟು ಬಟರ್ ಚಿಕನ್ ತಿನ್ನುವ ಬದಲು ಮನೆಯಲ್ಲಿಯೇ ಈ ರುಚಿಯಾದ ಬಟರ್  ಚಿಕನ್ ಮಾಡಿ.

ಬೇಕಾಗುವ ಸಾಮಾಗ್ರಿಗಳು : ಕೋಳಿಮಾಂಸ ½  ಕೆ.ಜಿ, 1 ಈರುಳ್ಳಿ, ಟೊಮೆಟೊ 2, ಖಾರ ಪುಡಿ 1 ಚಮಚ, ಜೀರಿಗೆ ಪುಡಿ ½ ಚಮಚ, ಮೊಸರು ಸ್ವಲ್ಪ, ಹಸಿಮೆಣಸು 4, ಗೋಡಂಬಿ ¼ ಕಪ್, ಬೆಣ್ಣೆ 50 ಗ್ರಾಂ, ಗರಂ ಮಸಾಲಾ ಸ್ವಲ್ಪ, ಪಲಾವ್ ಎಲೆ-ಒಂದು. ಉಪ್ಪು.

ಮಾಡುವ ವಿಧಾನ :  ಮೊದಲಿಗೆ ಚಿಕನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಮೊಸರು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅರ್ಧ ಗಂಟೆ ಹಾಗೇ ಇಡಿ. ನಂತರ  ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಚಿಕನ್ ಹಾಕಿ ಹತ್ತು ನಿಮಿಷ ಹುರಿದುಕೊಳ್ಳಿ. ಬಳಿಕ ಒಂದು ಬಾಣಲೆಯಲ್ಲಿ ಬೆಣ್ಣೆ ಹಾಕಿ ಅದು ಕರಗಿದ ಮೇಲೆ ಪಲಾವ್ ಎಲೆ, ಪೇಸ್ಟ್ ಮಾಡಿದ ಈರುಳ್ಳಿ, ಟೊಮೆಟೊ ಪೇಸ್ಟ್ ಹಾಕಿ ಕುದಿಸಿ. ನಂತರ ಇದಕ್ಕೆ ಮೆಣಸಿನ ಪುಡಿ, ಜೀರಿಗೆ ಪುಡಿ ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಇದಕ್ಕೆ ಗೋಡಂಬಿಯನ್ನು ರುಬ್ಬಿ ಹಾಕಿ, ನಂತರ ಇದಕ್ಕೆ ಸ್ವಲ್ಪ ಮೊಸರು, ಚಿಕನ್, ಗರಂ ಮಸಾಲಾ  ಸೇರಿಸಿ ಬೇಯಿಸಿ. ಕೊನೆಗೆ ಕೊತ್ತಂಬರಿಸೊಪ್ಪಿನಿಂದ ಅಲಂಕಾರ ಮಾಡಿದರೆ ರುಚಿಯಾದ ಬಟರ್ ಚಿಕನ್ ರೆಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments