Publish Date: Fri, 26 Jul 2019 (14:08 IST)
Updated Date: Fri, 26 Jul 2019 (14:13 IST)
ಪ್ರಶ್ನೆ: ನಾನು 35 ವರ್ಷದ ಯುವಕ. ಇನ್ನೂ ಮದುವೆಯಾಗಿಲ್ಲ. ನಮ್ಮ ಸಮುದಾಯದಲ್ಲಿ ಮದುವೆಗಾಗಿ ಹುಡುಗಿಯನ್ನು ಹುಡುಕಿ ಸಾಕಾಗಿ ಹೋಗಿದೆ. ಎಲ್ಲೂ ಹುಡುಗಿ ಸೆಟ್ ಆಗ್ತಿಲ್ಲ. ಈ ನಡುವೆ ವಯಸ್ಸೂ ಹೆಚ್ಚಾಗುತ್ತಿದೆ.
ಗೆಳೆಯರು ಹಾಗೂ ಆಫೀಸ್ ಸ್ಟಾಫ್ ನಿತ್ಯವೂ ವ್ಯಂಗ್ಯವಾಡುತ್ತಿದ್ದಾರೆ. ಹೀಗಾಗಿ ಅವರೊಂದಿಗೆ ಹೋಗಿ ವೈಶ್ಯಯರ ಸಹವಾಸ ಮಾಡುತ್ತಿದ್ದೇನೆ. ನಾನು ಮದುವೆಯಾದರೆ ನನಗೆ ಹಾಗೂ ನನ್ನ ಪತ್ನಿಗೆ ಏನಾದರೂ ತೊಂದರೆಯಾಗಬಹುದಾ?
ಉತ್ತರ: ಹಗಲು ಕಂಡ ಬಾವಿಗೆ ರಾತ್ರಿ ಬೀಳೋದು ಅಂತ ಹಿರಿಯರು ನಿಮ್ಮ ಈ ನಡೆ ನೋಡಿಯೇ ಹೇಳಿರಬೇಕು. ಕ್ಷಣಿಕ ಸುಖಕ್ಕಾಗಿ ವೈಶ್ಯೆಯರ ಸಹವಾಸ ಬಿಟ್ಟುಬಿಡಿ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಏಡ್ಸ್ ನಂತಹ ಮಾರಕ ಕಾಯಿಲೆಗಳು ನಿಮ್ಮ ಜೀವವನ್ನೇ ಬಲಿ ತೆಗೆದುಕೊಳ್ಳಬಲ್ಲದು. ಆಕರ್ಷಣೆ ಹಾಗೂ ವಯೋಸಹಜ ಕುತೂಹಲಕ್ಕೆ ನೀವು ಮಾಡಿದ್ದು ತಪ್ಪು.
ನೀವು ಪರಿಶುದ್ಧ ಹೆಣ್ಣನ್ನು ಮದುವೆಗೆ ಆಸೆ ಪಡುವಂತೆ ಆಕೆ ಕೂಡ ನನ್ನ ಗಂಡ ಶ್ರೀರಾಮ ನಂತೆ ಇರಲಿ ಎಂದುಕೊಂಡಿರುತ್ತಾಳೆ. ನಿಮ್ಮ ಕ್ಷಣಿಕ ಸುಖಕ್ಕಾಗಿ ಭವಿಷ್ಯವನ್ನ ಬಲಿಕೊಡಬೇಡಿ. ಖಂಡಿತವಾಗಿ ಉತ್ತಮ ಹುಡುಗಿ ನಿಮ್ಮ ಪತ್ನಿಯಾಗುತ್ತಾಳೆ. ಲೈಂಗಿಕ ಕ್ರಿಯೆಗೆ ಕಾಲ್ ಗರ್ಲ್ ಗಳ ಸಹವಾಸ ತರವಲ್ಲ. ಬೇರೆ ಜಾತಿಯ ಹುಡುಗಿಯದ್ದರೂ ನಿಮಗೆ ಸೆಟ್ ಆದರೆ ಮದುವೆ ಮಾಡಿಕೊಳ್ಳಿ.