Publish Date: Mon, 20 May 2019 (11:24 IST)
Updated Date: Mon, 20 May 2019 (11:30 IST)
ಬೆಂಗಳೂರು : ಎಕ್ಸಿಟ್ ಪೋಲ್ ವರದಿಯಿಂದ ಹಾಲಿ ಕೈ ಸಂಸದರು ಸೋಲುತ್ತಾರೆ ಅನ್ನೋ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಆತಂಕ ಶುರುವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು, ಎಕ್ಸಿಟ್ ಪೋಲ್ ಮೇಲೆ ನನಗೆ ನಂಬಿಕೆ ಇಲ್ಲ. ನಮ್ಮ ಪ್ರಕಾರ ಎನ್ ಡಿಎ 225 ಸೀಟ್ ಪಡೆಯಬಹುದು, ಬಿಜೆಪಿ ಅಲ್ಲ. ಒಂದು ವೇಳೆ ಎಕ್ಸಿಟ್ ಪೋಲ್ ಸತ್ಯವಾದರೆ ಅದು ಜನರ ತೀರ್ಪಾಗುತ್ತೆ. ಅದಕ್ಕೆ ನಾವು ಬಾಗುತ್ತೇವೆ ಎಂದು ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಗೆ 18 ಸೀಟ್ ಬರುವ ವಿಶ್ವಾಸ ಇದೆ. ಮಂಡ್ಯ ಎಕ್ಸಿಟ್ ಪೋಲ್ ನಲ್ಲಿ ವ್ಯತ್ಯಾಸ ಇದೆ. 7 ರಲ್ಲಿ 4 ನಿಖಿಲ್ ಪರವಾಗಿದೆ. ಮೂರು ಎಕ್ಸಿಟ್ ಪೋಲ್ ನಲ್ಲಿ ಸುಮಲತಾ ಪರವಾಗಿದೆ. ಯಾಕೆ ಆತುರ ಮೇ. 23 ರ ವರೆಗೆ ಕಾಯಿರಿ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.