Publish Date: Mon, 20 May 2019 (09:31 IST)
Updated Date: Mon, 20 May 2019 (09:35 IST)
ಬೆಂಗಳೂರು : ಎಕ್ಸಿಟ್ ಪೋಲ್ ವರದಿಯಿಂದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೋಲಿನ ಭಯ ಶುರುವಾಗಿದೆ. ರಾಹುಲ್ ಗಾಂಧಿಗೆ ಭರವಸೆ ಕೊಟ್ಟು ಇಕ್ಕಟ್ಟಿಗೆ ಸಿಲುಕಿದ್ರಾ ರಾಜ್ಯ ಕೈ ನಾಯಕರು ಎಂಬ ಪ್ರಶ್ನೆ ಉದ್ಭವವಾಗಿದೆ.
ಹೌದು. ರಾಜ್ಯ ನಾಯಕರು ರಾಹುಲ್ ಗಾಂಧಿಗೆ 12 ಸೀಟು ಗೆಲ್ಲಬಹುದು ಅನ್ನೋ ಮಾಹಿತಿ ಕೊಟ್ಟಿದ್ದರು. ಹಾಲಿ ಸಂಸದರೂ ಸೇರಿ 3 ಹೆಚ್ಚುವರಿ ಸೀಟುಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.
ಆದರೆ ಎಕ್ಸಿಟ್ ಪೋಲ್ ನಲ್ಲಿ 3-4 ಹಾಲಿ ಕೈ ಸಂಸದರು ಸೋಲುತ್ತಾರೆ ಅನ್ನೋ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಕೈ ನಾಯಕರು ಮತ್ತಷ್ಟು ಕಂಗೆಟ್ಟಿದ್ದಾರೆ. ಚಿಕ್ಕಬಳ‍್ಳಾಪುರ, ಕೋಲಾರ, ಬಳ್ಳಾರಿಯ ಬಗ್ಗೆ 50-50 ಚಾನ್ಸ್ ಅನ್ನೋ ಮಾಹಿತಿ ಲಭ್ಯವಾಗಿದೆ. ಇದು ಅಂದಾಜು ವರದಿಯಾದರೂ ಕೂಡ ಮುಂದೆ ಈ ವರದಿ ಪ್ರಕಾರವೇ ಆದರೆ ಏನು ಗತಿ ಎಂಬುದು ಕೈ ನಾಯಕರ ಆತಂಕವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.