ಯುವತಿಗೆ ಚಾಕು ತೋರಿಸಿ ಕಿರುತೆರೆ ನಟನಿಂದ ಅತ್ಯಾಚಾರ

ಸೋಮವಾರ, 20 ಮೇ 2019 (07:07 IST)
ಬೆಂಗಳೂರು : ಯುವತಿಯೊಬ್ಬಳಿಗೆ ಚಾಕು ತೋರಿಸಿ ಕಿರುತೆರೆ ನಟ ಮತ್ತು ಆತನ  ಸ್ನೇಹಿತರಿಬ್ಬರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ನಟ ರಾಕೇಶ್, ಆತನ ಸ್ನೇಹಿತರಾದ ಮಣಿ, ಸೂರ್ಯ ಅತ್ಯಾಚಾರ ಎಸಗಿದ ಆರೋಪಿಗಳು. ಮಣಿಪುರಿ ಮೂಲದ ಯುವತಿ ಕೆಂಗೇರಿಯ ಕಾಲೇಜೊಂದರಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದು, ಮತ್ತೊಬ್ಬಳು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಇಬ್ಬರು ಕೋರಮಂಗಲದ ಅಪಾರ್ಟ್‌ ಮೆಂಟ್‌ ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರಿಂದ ಪರಿಚಯದವರಾಗಿದ್ದರು.


ಆದರೆ ಮೇ 12 ರಂದು ನಟ ರಾಕೇಶ್, ಆತನ ಸ್ನೇಹಿತರು ಯುವತಿಯ ಅಪಾರ್ಟ್‌ಮೆಂಟ್‌ ಗೆ ನುಗ್ಗಿ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಯುವತಿಯರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇನ್ನು ಮುಂದೆ ನಿಮಗೆ ಮೊಬೈಲ್ ಗೆ ಚಾರ್ಜ್ ಮಾಡುವ ಚಿಂತೆಯಿರಲ್ಲ. ಯಾಕೆ ಗೊತ್ತಾ?