Select Your Language

Notifications

webdunia
webdunia
webdunia
webdunia

ಉಪ ಕದನದಲ್ಲಿ ಭರ್ಜರಿ ಮತದಾನ; ಶೇ. 75 ನಿರೀಕ್ಷೆ

ಉಪ ಕದನದಲ್ಲಿ ಭರ್ಜರಿ ಮತದಾನ; ಶೇ. 75 ನಿರೀಕ್ಷೆ
ಹುಬ್ಬಳ್ಳಿ , ಭಾನುವಾರ, 19 ಮೇ 2019 (13:54 IST)
ರಾಜ್ಯ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿಗೆ ಕಾರಣ ಎನ್ನಲಾದ ಕುಂದಗೋಳ ಹಾಗೂ ಚಿಂಚೋಳಿ ಉಪಚುನಾವಣೆಗೆ ಮತದಾನ ನಡೆಯುತ್ತಿದ್ದು, ಬೆಳ್ಳಿಗ್ಗೆಯಿಂದಲೇ ಮತದಾರ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ. 

     
ಒಟ್ಟು 214 ಮತಗಟ್ಟೆಗಳಲ್ಲಿ 97527 ಪುರುಷರು, 91910 ಮಹಿಳೆಯರು ಹಾಗೂ ತೃತೀಯ ಲಿಂಗಿಗಳು ನಾಲ್ವರು ಸೇರಿ ಒಟ್ಟು 1,89,44 ಮತದಾರರು ಉಭಯ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಣಯ ಮಾಡಲಿದ್ದು,  ಬೆಳಗ್ಗೆ 7 ರಿಂದಲ್ಲೇ ಕ್ಷೇತ್ರದಾದ್ಯಂತ ಮತದಾನ ನಡೆಯುತ್ತಿದೆ. ಮೊದಲೇ ಸೂರ್ಯನ ತಾಪಮಾನ ಹೆಚ್ಚಾಗುವ ಕಾರಣದಿಂದಾಗಿ ಮತದಾರ ಬೆಳಿಗ್ಗೆಯ ಸಮಯದಲ್ಲಿಯೇ ಮತದಾನ ಮಾಡಲು ಮುಂದಾಗಿರುವ ಕಾರಣ ಬೆಳಿಗ್ಗೆ 7 ರಿಂದ 11 ಗಂಟೆವರೆಗೆ ಮತದಾನ ತುಸು ಚುರುಕು ಪಡೆದುಕೊಂಡಿದ್ದರೇ, ನಂತರ ಸಮಯದಲ್ಲಿ ಸೂರ್ಯನ ಬಿಸಿಲಿನ ತಾಪಮಾನದಿಂದಾಗಿ ಜನ ಹೊರಗಡೆ ಬರಲಿಲ್ಲ‌.

ಈ ಕಾರಣದಿಂದ ಆಗೊಮ್ಮೇ ಇಗೊಮ್ಮೆ ಮತದಾ‌ನ ನಡೆದರೆ, ಇನ್ನೂ ಸಂಜೆ 6 ರವರಗೆ ಮತದಾನಕ್ಕೆ ಅವಕಾಶವಿರುವ ಕಾರಣ ಮತ್ತಷ್ಟು ಮತದಾನ ಆಗುವ ನೀರಿಕ್ಷೆ ಇದೆ. ಒಟ್ಟು ಕ್ಷೇತ್ರದಾದ್ಯಂತ  ಶೇ. 75 ರಷ್ಟು ಮತದಾನವಾಗುವ ನಿರೀಕ್ಷೆ ಇದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಮನ್ವಯ ಸಮಿತಿಗೆ ಸಿದ್ದರಾಮಯ್ಯರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಯಾರು?