Select Your Language

Notifications

webdunia
webdunia
webdunia
webdunia

ಸಮನ್ವಯ ಸಮಿತಿಗೆ ಸಿದ್ದರಾಮಯ್ಯರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಯಾರು?

ಸಮನ್ವಯ ಸಮಿತಿಗೆ ಸಿದ್ದರಾಮಯ್ಯರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಯಾರು?
ವಿಜಯಪುರ , ಭಾನುವಾರ, 19 ಮೇ 2019 (13:40 IST)
ಮೈತ್ರಿ ಸರಕಾರದ ಕುರಿತು ಸ್ವಪಕ್ಷಗಳೇ ಮುಖಂಡರೇ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದಾರೆ. ಏತನ್ಮಧ್ಯೆ ಸಮನ್ವಯ ಸಮಿತಿ ಮಾಡಿದ್ದು ಯಾರು ಎಂಬ ಚರ್ಚೆ ಈಗ ಶುರುವಾಗಿದೆ.

ಮೈತ್ರಿ ಸರಕಾರದ ಸಮನ್ವಯ ಸಮಿತಿ ಮಾಡಿದ್ದು ಸಿದ್ದರಾಮಯ್ಯ ಅಲ್ಲಾ. ರಾಹುಲ್ ಗಾಂಧಿ  ಹಾಗೂ ದೇವೇಗೌಡ ಮಾಡಿದ್ದಾರೆ. ಉಭಯ ಪಕ್ಷಗಳ ಮುಖಂಡರು ಸದಸ್ಯರಾಗಿದ್ದಾರೆ.

ಹೆಚ್.ವಿಶ್ವನಾಥ ಹೇಳಿಕೆಗಳ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಪಕ್ಷದ ಅಧ್ಯಕ್ಷರಿದ್ದಾರೆ. ಸರ್ಕಾರ ನಡೆಸಲು ಮನಸ್ಸಿಲ್ಲದಿದ್ದರೆ ನಿರ್ಧಾರ ಹೇಳಲಿ. ಗೊಂದಲ ಹೇಳಿಕೆ ನೀಡುವುದು ಸರಿಯಲ್ಲ. ವಿಶ್ವನಾಥ ನೀಡುವ ಎಲ್ಲಾ ಹೇಳಿಕೆಗಳಿಗೆ ಉತ್ತರಿಸಲಾಗದು. ಹೀಗಂತ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಕಾಂಗ್ರೆಸ್ ಮೈತ್ರಿ ಧರ್ಮಪಾಲನೆ ಮಾಡುತ್ತಿಲ್ಲವೆಂದು  ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಸಿಎಂ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಈ ಕುರಿತು ಸಿಎಂ ಅವರನ್ನೇ ಕೇಳಿ ಅಂತ ವಿಜಯಪುರದಲ್ಲಿ ಅಂದಿದ್ದಾರೆ ಕಂದಾಯ ಸಚಿವ.



 

Share this Story:

Follow Webdunia kannada

ಮುಂದಿನ ಸುದ್ದಿ

ಬೈ ಎಲೆಕ್ಷನ್ ನಲ್ಲಿ ಯುವಕರಿಗೆ ಪ್ರೇರಣೆಯಾದ ವಯೋವೃದ್ಧೆ