Publish Date: Sat, 18 May 2019 (14:49 IST)
Updated Date: Sat, 18 May 2019 (14:51 IST)
ಜೆಡಿಎಸ್ ರಾಜ್ಯಾಧ್ಯಕ್ಷರ ವಿರುದ್ಧ ಸಿದ್ದರಾಮಯ್ಯರ ಜಟಾಪಟಿ ಬೆನ್ನಲ್ಲೇ ಈಗ ಸಚಿವರು ಟಾಂಗ್ ನೀಡುತ್ತಿದ್ದಾರೆ.
ಹೆಚ್. ವಿಶ್ವನಾಥ್ ಹೇಳಿಕೆಗೆ ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದ್ದಾರೆ.
ಈಗಾಗಲೇ ರಾಹುಲ್ ಗಾಂಧಿ, ಹೆಚ್.ಡಿ. ದೇವೇಗೌಡರು ಸೇರಿ ಸಮನ್ವಯ ಸಮಿತಿ ರಚನೆ ಮಾಡಿಕೊಂಡಿದ್ದಾರೆ.
ಯಾರು ಯಾರು ಇರಬೇಕು ಎಂದು ಹೈಕಮಾಂಡ್ ನಾಯಕರೇ ತೀರ್ಮಾನಿಸಿದ್ದಾರೆ. ಗೊಂದಲಗಳು ಎಲ್ಲ ಕಡೆ ಇದ್ದೇ ಇರುತ್ತವೆ ಎಂದರು.
ಅವರಿಗೂ ಹೈಕಮಾಂಡ್ ಇದೆ ಅಲ್ಲಿ ಮಾತನಾಡಲಿ. ಯಾರನ್ನೂ ಸಮನ್ವಯ ಸಮಿತಿಯಲ್ಲಿ ಸೇರಿಸಬಾರದು ಅಂತಿಲ್ಲ. ಸೇರಿಸಲು ಅವಕಾಶ ಇದೆ. ನಾವೂ ಬೇಕಿದ್ರೆ ನಮ್ಮ ಹೈಕಮಾಂಡ್ ನಾಯಕರಿಗೆ ಮನವಿ ಮಾಡ್ತೀವಿ. ಅದು ಬಿಟ್ಟು ಗೊಂದಲ ಸೃಷ್ಟಿ ಮಾಡುವುದು ಬೇಡ ಅಂತ ಸಚಿವ ಕೃಷ್ಣಭೈರೇಗೌಡ ಹೇಳಿಕೆ ನೀಡಿದ್ದಾರೆ.