Publish Date: Thu, 04 Apr 2019 (18:02 IST)
Updated Date: Thu, 04 Apr 2019 (18:05 IST)
ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಟೆಂಪಲ್ ರನ್ ಮಾಡಿದ್ದಾರೆ.
ಕಲಬುರಗಿ ನಗರದ ಶರಣ ಬಸವೇಶ್ವರ ದೇವಸ್ಥಾನ, ಖಾಜಾ ಬಂದೇ ನವಾಜ್ ದರ್ಗಾಕ್ಕೆ ಭೇಟಿ ನೀಡಿದ್ದಾರೆ. ನಾಮಪತ್ರ ಸಲ್ಲಿಕೆಗೂ ಹಿಂದಿನ ದಿನ ಟೆಂಪಲ್ ರನ್ ಮಾಡಿದ್ದಾರೆ.
ಅನೇಕ ಗುರುಹಿರಿಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿರುವ ಖರ್ಗೆಗೆ ಕೈ ಮುಖಂಡರು ಸಾಥ್ ನೀಡಿದ್ದಾರೆ.
ನಾನು ಚಿಕ್ಕವನಾಗಿದ್ದಾಗಿನಿಂದ ಶರಣಬಸವೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದೆ. ಕಾಂಗ್ರೆಸ್ ನವರಿಗೆ ಈಗ ದೇವಸ್ಥಾನಗಳು ನೆನಪಾಗ್ತಿವೆ ಎಂಬ ಅಮಿತ್ ಷಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಮಿತ್ ಷಾ ಸಲುವಾಗಿ ನಾನು ಹುಟ್ಟಿಲ್ಲ, ಅವರ ಪಾಠ ನನಗೆ ಬೇಕಾಗಿಲ್ಲ ಅಂತ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.