Publish Date: Wed, 27 Mar 2019 (09:25 IST)
Updated Date: Wed, 27 Mar 2019 (09:27 IST)
ಬಳ್ಳಾರಿ : ಸೊಕ್ಕಿನ ಮಾತುಗಳನ್ನಾಡುವ ಸಚಿವ ಡಿಕೆ ಶಿವಕುಮಾರ್ ಹೆಣ ಹೊರುವುದು ಖಾಯಂ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಚಿವ ಡಿಕೆ ಶಿವಕುಮಾರ್ ಮೊದಲು ಸರಿಯಾಗಿ ಮಾತನಾಡುವುದು ಕಲಿಯಲಿ, ಸೊಕ್ಕಿನ ಮಾತುಗಳು ಬೇಡ. ಇನ್ನು ಮುಂದೆ ಅವರಿಗೆ ಹೆಣ ಹೊರುವುದು ಖಾಯಂ ಕೆಲಸವಾಗಲಿದೆ. ಮುಂದೊಂದು ದಿನ ಅವರು ಬಿಜೆಪಿ ಹಾಗೂ ನಮೋ ಪಲ್ಲಕ್ಕಿ ಹೊರಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ಸಿನಲ್ಲಿ ನನ್ನ ಬಿಟ್ಟರೆ ಗತಿ ಯಾರೂ ಇಲ್ಲ ಅಂತ ದಿಮಾಕು. ಕಾಂಗ್ರೆಸ್ಸಿನಲ್ಲಿ ಪಲ್ಲಕ್ಕಿ ಹೊರುವುದಕ್ಕೂ ನಾನೇ, ಹೆಣ ಹೊರುವುದಕ್ಕೂ ನಾನೇ ಅಂತ ಬೀಗುತ್ತಾರೆ. ಆದ್ರೆ ಅವರ ಅಹಂಕಾರ, ದಿಮಾಕು, ಸೊಕ್ಕು ಬಹಳ ದಿನ ಇರಲ್ಲ. ಬಳ್ಳಾರಿಯ ಜನ ಸ್ವಾಭಿಮಾನಿಗಳಾಗಿದ್ದು ಒಂದು ಸಲ ಜನರು ಪಾಠ ಕಲಿಸಿದರೆ ಮತ್ತೆ ಕನಕಪುರದಿಂದ ಬಳ್ಳಾರಿಗೆ ಡಿಕೆಶಿ ವಾಪಸ್ ಬರಲ್ಲವೆಂದು ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.