Publish Date: Tue, 26 Mar 2019 (16:46 IST)
Updated Date: Tue, 26 Mar 2019 (16:49 IST)
ಲೋಕಸಭೆ ಎಲೆಕ್ಷನ್ ಮೆಗಾವೋಲ್ಟೇಜ್ ಕಾವು ಪಡೆದುಕೊಳ್ಳುತ್ತಿರುವಂತೆ ಎಐಸಿಸಿ ಸ್ಟಾರ್ ಕ್ಯಾಂಪೇನರ್ ಪಟ್ಟಿ ರಿಲೀಸ್ ಮಾಡಿದೆ.
ಎಐಸಿಸಿ ಸ್ಟಾರ್ ಕ್ಯಾಂಪೇನರ್ ಗಳ ಪಟ್ಟಿ ಬಿಡುಗಡೆಯಾಗಿದೆ. ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಏಕೈಕ ಕರ್ನಾಟಕದ ರಾಜಕಾರಣಿ ಹಿರಿಯ ಮುತ್ಸದ್ದಿಯಾಗಿದ್ದಾರೆ.
ಕಲಬುರಗಿ ಸಂಸದ ಮಲ್ಲಿಕಾರ್ಜುನ್ ಖರ್ಗೆಗೆ ಮಾತ್ರ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಸ್ಥಾನ ದೊರಕಿದೆ. ಒಟ್ಟೂ 40 ಮಂದಿ ಸ್ಟಾರ್ ಕ್ಯಾಂಪೇನರ್ ಲಿಸ್ಟ್ ರೆಡಿಯಾಗಿದೆ. ಅದರಲ್ಲಿ ಕೆ.ಸಿ.ವೇಣುಗೋಪಾಲ್ ಕೂಡ ಸ್ಟಾರ್ ಕ್ಯಾಂಪೇನರ್ ಆಗಿದ್ದಾರೆ.