ಮರಣ ಕ್ಷಣದಲ್ಲಿ ಮತ್ತು ಮರಣದ ನಂತರ ಮನುಷ್ಯನಿಗೆ ಏನಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲಿ ಇದ್ದೇ ಇದೆ. ನಮ್ಮ ಶರೀರದಿಂದ ಯಮದೂತರು ಆತ್ಮವನ್ನು ಹೇಗೆ ಕೊಂಡೊಯ್ಯುತ್ತಾರೆ ಎಂಬುದನ್ನು ವಿದ್ವಾನ್ ಶ್ರೀ ಬ್ರಹ್ಮಣ್ಯಾಚಾರ್ಯರು ವೇದಿಕ್ ವೆಲ್ ನೆಸ್ ಯೂ ಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ವಿವರವಾಗಿ ಹೇಳಿದ್ದಾರೆ.
ಧಾರ್ಮಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ಅನೇಕ ವಿಡಿಯೋಗಳು, ಸಂದರ್ಶನಗಳನ್ನು ಪ್ರಕಟಿಸುವ ವೇದಿಕ್ ವೆಲ್ ನೆಸ್ ಎನ್ನುವ ಯೂ ಟ್ಯೂಬ್ ಚಾನೆಲ್ ನಲ್ಲಿ ವಿದ್ವಾನ್ ಶ್ರೀ ಬ್ರಹ್ಮಣ್ಯಾಚಾರ್ಯರು ಮರಣ ಕ್ಷಣದ ಅನುಭವಗಳನ್ನು ವಿವರವಾಗಿ ಹೇಳಿದ್ದಾರೆ.
ಮರಣ ಕ್ಷಣದಲ್ಲಿ ಯಮದೂತರು ಆತ್ಮವನ್ನು ಕೊಂಡೊಯ್ಯಲು ಬರುವಾಗ ಮನುಷ್ಯ ಒಮ್ಮೆಲೇ ಸಾವಿರ ಚೇಳು ಕಡಿದ ನೋವು ಅನುಭವಿಸುತ್ತಾನೆ. ಆದರೆ ಆ ಕ್ಷಣದಲ್ಲಿ ಅವನಿಗೆ ಮಾತನಾಡಲು ಮಾತು ಬರುವುದಿಲ್ಲ. ತನಗೆ ಏನಾಗುತ್ತಿದೆ ಎಂದು ಹೇಳಿಕೊಳ್ಳಲು ಆಗುವುದಿಲ್ಲ.
ಜೀವನದಲ್ಲಿ ಸ್ವಲ್ಪವಾದರೂ ಪುಣ್ಯ ಮಾಡಿದ್ದರೆ ನಾಭಿ, ಹೃದಯ, ಕಂಠ, ಶಿರದ ಮೂಲಕ ಆತ್ಮ ಹೊರಹೋಗುತ್ತದೆ. ಪಾಪ ಕರ್ಮಗಳನ್ನೇ ಮಾಡಿದ್ದರೆ ಅಧೋಮುಖವಾಗಿ ಆತ್ಮ ಹೊರಗೆ ಹೋಗುತ್ತದೆ ಎಂದಿದ್ದಾರೆ. ಗರುಡ ಪುರಾಣದ ಪ್ರಕಾರ ಪ್ರಾಣ ಹೋಗುವ ಹಂತದಲ್ಲಿ ನಮಗೆ ಏನಾಗುತ್ತದೆ ಎಂದು ಬ್ರಹ್ಮಣ್ಯಾಚಾರ್ಯರು ವೇದಿಕ್ ವೆಲ್ ನೆಸ್ ಚಾನೆಲ್ ಗೆ ನೀಡಿದ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ.