Select Your Language

Notifications

webdunia
webdunia
webdunia
webdunia

ಲೋ ಬಿಪಿ ಇರುವವರು ಡಾ ಸಿಎನ್ ಮಂಜುನಾಥ್ ಅವರ ಈ ಮಾತು ತಪ್ಪದೇ ನೋಡಿ

Dr CN Manjunath

Krishnaveni K

ಬೆಂಗಳೂರು , ಸೋಮವಾರ, 20 ಅಕ್ಟೋಬರ್ 2025 (09:57 IST)
ಇಂದಿನ ದಿನಗಳಲ್ಲಿ ಅಧಿಕ ರಕ್ತದೊತ್ತಡದಂತೇ ಲೋ ಬಿಪಿ ಕೂಡಾ ಸಾಮಾನ್ಯ ಸಮಸ್ಯೆಯಾಗುತ್ತಿದೆ. ಲೋ ಬಿಪಿ ಇರುವವರು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಅವರ ಈ ಮಾತು ನೋಡಿ.

ಅಧಿಕ ರಕ್ತದೊತ್ತಡ ಹೃದಯ ಸಮಸ್ಯೆಗೆ ಕಾರಣವಾಗುತ್ತದೆ. ಆದರೆ ಕಡಿಮೆ ರಕ್ತದೊತ್ತಡದಿಂದ ಹೃದಯ ಸಮಸ್ಯೆ ಬರುತ್ತದಾ ಎನ್ನುವ ಸಂಶಯ ಅನೇಕರಲ್ಲಿರುತ್ತದೆ. ಆದರೆ ಡಾ ಸಿಎನ್ ಮಂಜುನಾಥ್ ಅವರ ಪ್ರಕಾರ ಕಡಿಮೆ ರಕ್ತದೊತ್ತಡದಿಂದ ಹೃದಯ ಖಾಯಿಲೆ ಬರುವ ಸಾಧ್ಯತೆಯಿಲ್ಲ. ಆದರೆ ಹೃದಯ ಸಮಸ್ಯೆಯಿಂದ ಲೋ ಬಿಪಿ ಬರಬಹುದು.

ಮೊದಲಿನಿಂದಲೂ ಲೋ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹವರಲ್ಲಿ ಆಗಾಗ ತಲೆ ಸುತ್ತು ಬಂದಂತೆ, ಬಳಲಿಕೆ, ನಿಶ್ಯಕ್ತಿ ಕಂಡುಬರುವ ಸಾಧ್ಯತೆಯಿದೆ. ಹೀಗಾಗಿ ಲೋ ಬಿಪಿ ಇರುವವರು ಆ ಸಮಸ್ಯೆ ಉಲ್ಬಣಿಸದಂತೆ ಎಚ್ಚರಿಕೆ ವಹಿಸಿದರೆ ಸಾಕು.

ಲೋ ಬಿಪಿ ಕೂಡಾ ಅಪಾಯಕಾರಿಯೇ. ಆದರೆ ಇದರಿಂದಾಗಿ ಹೃದಯ ಖಾಯಿಲೆ ಬರಬಹುದು ಎಂಬ ಅತಂಕ ಪಟ್ಟುಕೊಳ್ಳುವುದು ಬೇಡ ಎಂದು ಡಾ ಸಿಎನ್ ಮಂಜುನಾಥ್ ಅಭಿಪ್ರಾಯ ಪಡುತ್ತಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ರಾಜ್ಯದಲ್ಲಿ ಈ ವಾರ ಮಳೆಯಿರುತ್ತಾ ಇಲ್ಲಿ ನೋಡಿ