Select Your Language

Notifications

webdunia
webdunia
webdunia
webdunia

ಹಾರ್ಟ್ ಅಟ್ಯಾಕ್ ಆದ ತಕ್ಷಣ ಟ್ಯಾಬ್ಲೆಟ್ ತೆಗೆದುಕೊಂಡ್ರೆ ರಿಸ್ಕ್ ಕಡಿಮೆಯಾಗುತ್ತಾ: ಡಾ ಸಿಎನ್ ಮಂಜುನಾಥ್

Dr CN Manjunath

Krishnaveni K

ಬೆಂಗಳೂರು , ಶುಕ್ರವಾರ, 17 ಅಕ್ಟೋಬರ್ 2025 (10:22 IST)
ಹೃದಯಾಘಾತವಾದ ತಕ್ಷಣ ನಾಲಿಗೆ ಕೆಳಗೆ ಒಂದು ಟ್ಯಾಬ್ಲೆಟ್ ಇಟ್ಕೊಂಡ್ರೆ ರಿಸ್ಕ್ ಕಡಿಮೆಯಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಇದರ ಬಗ್ಗೆ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಸಂವಾದವೊಂದರಲ್ಲಿ ಹೀಗೆ ಹೇಳಿದ್ದರು.

ಕೆಲವೊಮ್ಮೆ ಆಸ್ಪತ್ರೆಗೆ ಸ್ವಲ್ಪ ದೂರ ಹೋಗಬೇಕು ಎಂದಾಗ ಹೃದಯಾಘಾತವಾದ ವ್ಯಕ್ತಿಯ ಪ್ರಾಣ ಉಳಿಸಲು ನಾಲಿಗೆ ಕೆಳಗೆ ವೈದ್ಯರು ಸೂಚಿಸುವ ಒಂದು ಮಾತ್ರೆಯನ್ನು ಇಟ್ಟು ಬದುಕಿಸಬಹುದು ಎಂದು ಕೆಲವರು ಹೇಳುತ್ತಾರೆ.

ನಾಲಿಗೆ ಕೆಳಗೆ ಇಡುವ ಮಾತ್ರೆಯಿಂದ ಕೊಂಚ ರಿಲೀಫ್ ಸಿಗಬಹುದು. ಆದರೆ ಅದುವೇ ಪರಿಹಾರ ಅಲ್ಲ. ಹೃದಯಾಘಾತವಾಗಲು ಮುಖ್ಯವಾಗಿ ರಕ್ತ ಹೆಪ್ಪುಗಟ್ಟುವುದು ಅಥವಾ ರಕ್ತನಾಳಗಳಲ್ಲಿ ಬ್ಲಾಕ್ ನಿಂದಾಗಿರುತ್ತದೆ. ಇಂತಹ ಸಂದರ್ಭದಲ್ಲಿ ರಕ್ತ ಸರಾಗವಾಗಿ ಸಂಚರಿಸಲು ಚಿಕಿತ್ಸೆ ನೀಡಬೇಕಾಗುತ್ತದೆ.

ಹೃದಯಾಘಾವತಾದಾಗ ಸಾಮಾನ್ಯವಾಗಿ ಆಸ್ಪರಿನ್ ಮಾತ್ರೆಯನ್ನು ಬೇಗನೇ ಕರಗಿ ದೇಹಕ್ಕೆ ಸೇರಿಕೊಳ್ಳಲು ಕಚ್ಚಿ ನೀರು ಕುಡಿಯಲು ಹೇಳುತ್ತೇವೆ. ಆದರೆ ಇದೆಲ್ಲಾ ಪರಿಹಾರವಲ್ಲ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಮಾತ್ರೆಗಳಿಂದ ಸಣ್ಣಪುಟ್ಟ ರಿಲೀಫ್ ಸಿಗಬಹುದಷ್ಟೇ ಎಂದು ಅವರು ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ರಸ್ತೆ ಗುಂಡಿ ವಿವಾದ ಮುಚ್ಚಲು ಆರ್ ಎಸ್ಎಸ್ ವಿವಾದ ಎಳೆದು ಹಾಕಿತಾ ಸರ್ಕಾರ