ಬೆಂಗಳೂರು: ಇತ್ತೀಚೆಗೆ ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ವಿಚಾರವಾಗಿ ಹಲ್ ಚಲ್ ಎಬ್ಬಿಸುತ್ತಿರುವುದು ಬೆಂಗಳೂರು ರಸ್ತೆ ಗುಂಡಿಗಳಿಂದಾಗಿ ಸರ್ಕಾರಕ್ಕೆ ಆಗಿರುವ ಮುಜುಗರ ತಪ್ಪಿಸಲು ಎಂದು ಬಿಜೆಪಿ ಮತ್ತು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್ ಶಾ ಮೊನ್ನೆ ಟ್ವೀಟ್ ಮಾಡಿ ಸರ್ಕಾರಕ್ಕೆ ಮುಜುಗರ ತಂದಿಟ್ಟಿದ್ದರು. ಈ ವಿಚಾರವಾಗಿ ಸಾರ್ವಜನಿಕರೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರ ನಡುವೆಯೇ ಗೂಗಲ್ ಎಐ ಹೂಡಿಕೆ ಆಂಧ್ರಪ್ರದೇಶದ ಪಾಲಾಯಿತು.
ಇದರ ನಡುವೆಯೇ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಇದ್ದಕ್ಕಿದ್ದಂತೆ ಆರ್ ಎಸ್ಎಸ್ ವಿಚಾರವನ್ನು ಹೊರತೆಗೆದಿದ್ದರು. ಹೀಗಾಗಿ ಇದು ಬೆಂಗಳೂರು ರಸ್ತೆ ಗುಂಡಿ ಮತ್ತು ಗೂಗಲ್ ಎಐ ಹೂಡಿಕೆ ಕೈತಪ್ಪಿದ್ದ ವಿಚಾರ ಮರೆಮಾಚಲು ಮಾಡುತ್ತಿರುವ ಗಿಮಿಕ್ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಪಬ್ಲಿಕ್ ಅಭಿಪ್ರಾಯಪಡುತ್ತಿದ್ದಾರೆ.
ಜನರ ಗಮನ ಬೇರೆಡೆ ಸೆಳೆಯಲು ಆರ್ ಎಸ್ಎಸ್ ನ್ನು ಟಾರ್ಗೆಟ್ ಮಾಡಿದ್ದಾರೆ. ಆರ್ ಎಸ್ಎಸ್ ವಿಚಾರ ತೆಗೆದರೆ ಬಿಜೆಪಿ ಕೂಡಾ ಅದರ ಹಿಂದೆಯೇ ಇರುತ್ತದೆ. ಮಾಧ್ಯಮಗಳೂ ಬೇರೆ ವಿಚಾರಗಳ ಬಗ್ಗೆ ಗಮನಕೊಡುವುದಿಲ್ಲ ಎಂದು ಈ ರೀತಿ ಮಾಡುತ್ತಿದ್ದರೆ ಎಂದು ಹೇಳಲಾಗುತ್ತಿದೆ.