Select Your Language

Notifications

webdunia
webdunia
webdunia
webdunia

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆಗೆ ಹಾಕಿದ್ದವ ಅರೆಸ್ಟ್‌, ಸಿಕ್ಕಿದ್ದೆಲ್ಲಿ ಗೊತ್ತು

Minister Priyank Kharge

Sampriya

ಕಲಬುರಗಿ , ಗುರುವಾರ, 16 ಅಕ್ಟೋಬರ್ 2025 (16:16 IST)
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದು, ಆತನನ್ನು ಮಹಾರಾಷ್ಟ್ರದ ಲಾತೂರ್‌ನಲ್ಲಿ ಬಂಧಿಸಲಾಗಿದೆ.

ಬಂಧಿತನನ್ನು ಸೋಲಾಪುರ ಮೂಲದ ದಾನೇಶ್ ನರೋಣಿ ಎಂದು ಗುರುತಿಸಲಾಗಿದೆ.  ಫೋನ್ ಕರೆ ಮಾಡಿದ ಬಳಿಕ ಸೋಲಾಪುರದಿಂದ ಲಾತೂರ್‌ಗೆ ಪರಾರಿಯಾಗಿದ್ದ. ಹೀಗಾಗಿ, ಬೆಂಗಳೂರು ಹಾಗೂ ಕಲಬುರಗಿ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. 

ಇಂದು ರಾತ್ರಿವೇಳೆಗೆ ಬೆಂಗಳೂರು ಸದಾಶಿವನಗರ ಪೊಲೀಸ್ ಠಾಣೆಗೆ ಆರೋಪಿಯನ್ನ ಕರೆತರುವ ಸಾಧ್ಯತೆ ಇದೆ. ಆರೋಪಿಯನ್ನು ಸದಾಶಿವನಗರ ಠಾಣೆ ಪೊಲೀಸರಿಗೆ ಕಲಬುರಗಿ ಪೊಲೀಸರು ಒಪ್ಪಿಸಲಿದ್ದಾರೆ. ಸೋಲಾಪುರದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಲಿದ್ದಾರೆ.

ಬಂಧಿತ ಗೂಗಲ್‌ನಲ್ಲಿ ಸಚಿವರ ಫೋನ್ ನಂಬರ್ ಅನ್ನು ಪಡೆದು ಫೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಸಂಬಂಧ ಸಚಿವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ನವೆಂಬರ್ ಕ್ರಾಂತಿ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ