Select Your Language

Notifications

webdunia
webdunia
webdunia
webdunia

ವರಮಹಾಲಕ್ಷ್ಮಿ ಹಬ್ಬಕ್ಕೆ ಏನೆಲ್ಲಾ ನೈವೇದ್ಯ ಮಾಡಬೇಕು ಮತ್ತು ಯಾಕೆ

Lakshmi Godess

Krishnaveni K

ಬೆಂಗಳೂರು , ಬುಧವಾರ, 6 ಆಗಸ್ಟ್ 2025 (10:33 IST)
ವರಮಹಾಲಕ್ಷ್ಮಿ ಹಬ್ಬ ಎಂದರೆ ವಿಶೇಷವಾಗಿ ಹೆಂಗಳೆಯರಿಗೆ ಸಂಭ್ರಮದ ಹಬ್ಬವಾಗಿದೆ. ಮಹಾಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ದಿನ. ಈ ದಿನ ದೇವಿ ಪೂಜೆ ಮಾಡುವವರು ಈ ವಸ್ತುಗಳನ್ನು ತಪ್ಪದೇ ನೈವೇದ್ಯವಾಗಿಡಬೇಕು.

ವರಮಹಾಲಕ್ಷ್ಮಿ ಹಬ್ಬವನ್ನು ಕೆಲವರು ದೇವಿಯ ಪ್ರತಿರೂಪ ನಿರ್ಮಿಸಿ ಭರ್ಜರಿಯಾಗಿ ಆಚರಿಸುತ್ತಾರೆ. ವರಮಹಾಲಕ್ಷ್ಮಿ ಹಬ್ಬ ಎನ್ನುವುದು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ. ಇದು ನಮ್ಮ ಸಂಸ್ಕೃತಿಯ ಸಂಕೇತವೂ ಹೌದು. ಸ್ತ್ರೀಯರನ್ನು ಗೌರವಿಸುವ ಪಾಠವನ್ನೂ ನಮಗೆ ಕಲಿಸುತ್ತದೆ.

ವರಮಹಾಲಕ್ಷ್ಮಿ ಹಬ್ಬದ ದಿನ ದೇವಿಗೆ ವಿವಿಧ ನೈವೈದ್ಯಗಳನ್ನಿಟ್ಟುಕೊಂಡು ಪೂಜೆ ಮಾಡುತ್ತಾರೆ. ಆದರೆ ದೇವಿಗೆ ನೈವೇದ್ಯ ಮಾಡುವಾಗ ಯಾವೆಲ್ಲಾ ವಸ್ತುಗಳು ಕಡ್ಡಾಯವಾಗಿರಬೇಕು ಎಂದು ತಿಳಿದುಕೊಳ್ಳಿ.

ಪಾಯಸ: ಬೆಲ್ಲ ಅಥವಾ ಹಾಲು ಹಾಕಿ ಮಾಡಿದ ಪಾಯಸ ಸಮೃದ್ಧಿಯ ಸಂಕೇತ.
ಕಡಲೆ ಕಾಳಿನ ಉಸುಳಿ: ಕೆಂಪು ಅಥವಾ ಬಿಳಿ ಕಡಲೆ ಬಳಸಿ ಮಾಡುವ ಉಸುಳಿ ಇರಲೇಬೇಕು. ಇದು ಧಾನ್ಯ ಲಕ್ಷ್ಮಿಯ ಸಂಕೇತವಾಗಿದೆ.
ಹೆಸರು ಬೇಳೆ ಒಬ್ಬಟ್ಟು: ಒಬ್ಬಟ್ಟಿನ ಸಿಹಿಯಂತೆ ನಮ್ಮ ಜೀವನದಲ್ಲೂ ಸಿಹಿ ತುಂಬಿರಬೇಕು.
ಮೊಸರನ್ನ/ಅನ್ನದ ಆಹಾರ: ಅನ್ನ ಅನ್ನಪೂರ್ಣೇಶ್ವರಿಯ ಸಂಕೇತ. ಹೀಗಾಗಿ ಅನ್ನದಿಂದ ತಯಾರಿಸಿದ ಮೊಸರನ್ನ ಅಥವಾ ಚಿತ್ರಾನ್ನ ಇರಬೇಕು.
ಹೂ/ಹಣ್ಣುಗಳು: ಹೂ ಮತ್ತು ಹಣ್ಣು ಶುಭದ ಸಂಕೇತ. ಇವುಗಳನ್ನು ನೈವೈದ್ಯದಲ್ಲಿ ತಪ್ಪದೇ ಬಳಸಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮನ್ನು ಇನ್ಯಾರು ಪ್ರಶ್ನೆ ಮಾಡಬೇಕಿತ್ತು: ರಾಹುಲ್ ಗಾಂಧಿ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಟ್ರೋಲ್