Select Your Language

Notifications

webdunia
webdunia
webdunia
webdunia

ನಿಮ್ಮನ್ನು ಇನ್ಯಾರು ಪ್ರಶ್ನೆ ಮಾಡಬೇಕಿತ್ತು: ರಾಹುಲ್ ಗಾಂಧಿ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಟ್ರೋಲ್

Rahul Gandhi-Priyanka Gandhi

Krishnaveni K

ನವದೆಹಲಿ , ಬುಧವಾರ, 6 ಆಗಸ್ಟ್ 2025 (10:28 IST)
ನವದೆಹಲಿ: ರಾಹುಲ್ ಗಾಂಧಿ ನಿಜವಾಗಿಯೂ ಭಾರತೀಯನಾಗಿದ್ದರೆ ಎಂದಿದ್ದ ಸುಪ್ರೀಂಕೋರ್ಟ್ ಗೆ ಪ್ರಿಯಾಂಕಾ ಗಾಂಧಿ ವಾದ್ರಾ ನ್ಯಾಯಾಲಯಕ್ಕೆ ಹೀಗೆ ಪ್ರಶ್ನಿಸುವ ಅಧಿಕಾರವಿಲ್ಲ ಎಂದಿದ್ದರು. ಇದಕ್ಕೆ ಈಗ ನೆಟ್ಟಿಗರು ಟ್ರೋಲ್ ಮಾಡಿದ್ದು ಹಾಗಿದ್ದರೆ ನಿಮ್ಮನ್ನು ಯಾರು ಪ್ರಶ್ನೆ ಮಾಡಬೇಕಿತ್ತು ಎಂದಿದ್ದಾರೆ.

ಭಾರತೀಯ ಸೇನೆಗೆ ಅವಮಾನ ಮಾಡಿದ ಪ್ರಕರಣದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ರಾಹುಲ್ ಗಾಂಧಿಗೆ ಛೀಮಾರಿ ಹಾಕಿತ್ತು. ಭಾರತ 2000 ಚದರ ಕಿ.ಮೀ. ಸ್ಥಳವನ್ನು ಚೀನಾ ವಶಪಡಿಸಿಕೊಂಡಿದೆ. ಭಾರತೀಯ ಸೇನೆಗೆ ಹೊಡೆದಿದೆ ಎಂದೆಲ್ಲಾ ಎರಡು ವರ್ಷದ ಹಿಂದೆ ರಾಹುಲ್ ಗಾಂಧಿ ಹೇಳಿದ್ದ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ರಾಹುಲ್ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್, ನಿಜವಾದ ಭಾರತೀಯನಾಗಿದ್ದರೆ ಈ ರೀತಿ ಭಾರತೀಯ ಸೇನೆ ಬಗ್ಗೆ ಹೇಳಿಕೆ ನೀಡಲು ಸಾಧ್ಯವೇ ಎಂದು ಛೀಮಾರಿ ಹಾಕಿತ್ತು.

ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ರಾಹುಲ್ ಸಹೋದರಿ, ಸಂಸದೆ ಪ್ರಿಯಾಂಕ ಗಾಂಧಿ ವಾದ್ರಾ, ನೀವು ನಿಜವಾದ ಭಾರತೀಯನೇ ಎಂದು ಪ್ರಶ್ನಿಸುವ ಅಧಿಕಾರ ನ್ಯಾಯಾಲಯ ಮತ್ತು ನ್ಯಾಯಾಧೀಶರ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದರು.

ಅವರ ಹೇಳಿಕೆಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹಾಗಿದ್ದರೆ ನಿಮ್ಮನ್ನು ಯಾರು ಪ್ರಶ್ನೆ ಮಾಡಬೇಕಿತ್ತು? ಯಾರೂ ಪ್ರಶ್ನೆ ಮಾಡಬಾರದು ಎಂದೇ ಎಂದು ಕೇಳಿದ್ದಾರೆ. ಅಥವಾ ಕೋರ್ಟ್ ಕೂಡಾ ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಯಬೇಕು ಎಂದು ನಿರೀಕ್ಷಿಸುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Video: ನೀವು ರಷ್ಯಾ ಜೊತೆ ವ್ಯಾಪಾರ ಮಾಡ್ತೀರಂತೆ ಎಂದಿದ್ದಕ್ಕೆ ಇಂಗು ತಿಂದ ಮಂಗನಂತಾದ ಡೊನಾಲ್ಡ್ ಟ್ರಂಪ್