ರಾಂಚಿ: ಟೀಂ ಇಂಡಿಯಾ ಕಂಡ ಯಶಸ್ವೀ ನಾಯಕ ಧೋನಿ ನಿವೃತ್ತಿ ಬಗ್ಗೆ ಆಗಾಗ ಅವರ ವಿರೋಧಿಗಳು ಪುಕಾರು ಹುಟ್ಟಿಸುತ್ತಿರುತ್ತಾರೆ. ಆದರೆ  ನಿವೃತ್ತಿ ಬಗ್ಗೆ ಸ್ವತಃ ಧೋನಿ ಹೇಳಿದ್ದೇನು ಗೊತ್ತಾ?
									
										
								
																	
 
ಇದನ್ನು ಅವರ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ ಸ್ಮರಿಸಿಕೊಂಡಿದ್ದಾರೆ. ಅಲ್ಲದೆ, ಅವರನ್ನು ತಂಡದಿಂದ ಕಿತ್ತೊಗೆಯುವ ಬಗ್ಗೆ ಕಿಡಿ ಕಾರಿರುವ ‘ಧೋನಿಗೆ ನಿವೃತ್ತಿಯಾಗು ಎಂದು ಯಾರೂ ಹೇಳಬೇಕಿಲ್ಲ. ತನ್ನ ಸಮಯವಾಗಿದೆ ಎಂದರೆ ಆತನೇ ಬೂಟ್ ಕಳಚಿಡುತ್ತಾನೆ’ ಎಂದು ಬ್ಯಾನರ್ಜಿ ತೀಕ್ಷ್ಣವಾಗಿ ಹೇಳಿದ್ದಾರೆ.
									
			
			 
 			
 
 			
			                     
							
							
			        							
								
																	‘ಕೆಲವು ದಿನಗಳ ಹಿಂದೆ ಧೋನಿ ನನಗೆ ಕರೆ ಮಾಡಿದ್ದ. ಆಗ ಸಮಯ ಬಂದಾಗ ನಾನೇ ನಿವೃತ್ತಿಯಾಗುತ್ತೇನೆ. ಯಾರಿಗೂ ಕಾಯಲ್ಲ ಎಂದಿದ್ದ’ ಎಂದು ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಆತ ಬಯಸಿದ್ದರೆ ಈಗಲೂ ನಾಯಕನಾಗಿಯೇ ಇರಬಹುದಿತ್ತು. ಬೇರೆ ಯಾರಿಗೂ ಅವನನ್ನು ತಡೆಯುವ ಹಕ್ಕಿಲ್ಲ ಎಂದು ಕೋಚ್ ಹೇಳಿಕೊಂಡಿದ್ದಾರೆ.