Select Your Language

Notifications

webdunia
webdunia
webdunia
webdunia

2019 ವಿಶ್ವಕಪ್ ತಂಡದಲ್ಲಿ ಧೋನಿ ಇರಬೇಕಾ..?: ಸೆಹ್ವಾಗ್ ಹೇಳಿದ್ದೇನು ಗೊತ್ತಾ..?

ವೀರೇಂದ್ರ ಸೆಹ್ವಾಗ್
ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2019ರ ವಿಶ್ವಕಪ್ ತಂಡದಲ್ಲಿ ಇರಬೇಕೆ..? ಬೇಡವೋ ಎಂಬ ಬಗ್ಗೆ ಆಯ್ಕೆ ಸಮಿತಿ ಗೊಂದಲದಲ್ಲಿರುವ ಬಿನ್ನಲ್ಲೇ ಧೋನಿ ಸ್ಥಾನ ತುಂಬಬಲ್ಲ ಆಟಗಾರನನ್ನ ಇನ್ನೂ ಹುಡುಕಬೇಕಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
 

`ಧೋನಿಯ ಸ್ಥಾನ ತುಂಬಬಲ್ಲ ಆಟಗಾರರು ಸದ್ಯಕ್ಕಂತೂ ಯಾರೂ ಇಲ್ಲ. ರಿಶಬ್ ಪಂತ್ ಒಳ್ಳೆಯ ಆಟಗಾರ, ಆದರೆ, ಧೋನಿ ಸ್ಥಾನ ತುಂಬಲು ರಿಶಬ್`ಗೆ ಬಹಳಷ್ಟು ಸಮಯ ಬೇಕಿದೆ. ಅದು 2019ರ ವಿಶ್ವಕಪ್ ಬಳಿಕವೇ ಸಾಧ್ಯ. ಆ ಬಳಿಕವಷ್ಟೇ ಧೋನಿಯ ಸ್ಥಾನವನ್ನ ತುಂಬುವ ಕುರಿತು ಯೋಚಿಸಬಹುದಾಗಿದೆ. ಅಲ್ಲಿಯವರೆಗೆ ರಿಶಬ್ ಪಂತ್ಯ ಻ನುಭವ ಪಡೆಯಲಿ ಎಂದು ನ್ಯೂಸ್ 18 ಸಂದರ್ಶನದಲ್ಲಿ ಸೆಹ್ವಾಗ್ ಹೇಳಿದ್ದಾರೆ

`ಧೋನಿ ರನ್ ಸ್ಕೋರ್ ಮಾಡುತ್ತಿದ್ದಾರಾ..? ಇಲ್ಲವೇ..? ಎಂಬ ಬಗ್ಗೆ  ತಲೆಕೆಡಿಸಿಕೊಳ್ಳುವುದು ಬೇಡ. 2019ರ ವಿಶ್ವಕಪ್`ವರೆಗೆ ಧೋನಿ ಫಿಟ್ ಆಗಿರುವಂತೆ ಪ್ರಾರ್ಥಿಸಬೇಕು. ಮಧ್ಯಮ ಮತ್ತು ಕೆಳ ಮಧ್ಯಮ ಕ್ರಮಾಂಕದಲ್ಲಿ ಧೋನಿ ಹೊಂದಿರುವ ಅನುಭವ ಯಾರಿಗೂ ಇಲ್ಲ ಎಂದು ಸೆಹ್ವಾಗ್ ಹೇಳಿದ್ಧಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಿವಿ ಸಿಂಧು ಭರ್ಜರಿ ಆಟ ನೋಡಿ ಸೈನಾ ನೆಹ್ವಾಲ್ ಪ್ರತಿಕ್ರಿಯೆ ಏನು ಗೊತ್ತಾ?