Publish Date: Mon, 28 Aug 2017 (10:10 IST)
Updated Date: Mon, 28 Aug 2017 (10:12 IST)
ನವದೆಹಲಿ: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಪರಸ್ಪರ ಅಭಿಪ್ರಾಯ ಹಂಚಿಕೊಂಡಿದ್ದೇ ಕಡಿಮೆ. ಆದರೆ ನಿನ್ನೆ ಸಿಂಧು ಆಡಿದ ರೀತಿ ನೋಡಿ ಅಲ್ಲೇ ಇದ್ದ ಸೈನಾ ಹೇಳಿದ ಅಭಿಪ್ರಾಯ ಮಾತ್ರ ಮೆಚ್ಚುಗೆಗೆ ಪಾತ್ರವಾಗಿದೆ.
ಇದೇ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿ ಹಿರಿಯ ತಾರೆ ಸೈನಾ ತಮಗಿಂತ ಕಿರಿಯವಳಾದ ಸಿಂಧು ಆಟ ನೋಡುವುದಕ್ಕೆಂದು ಗ್ಯಾಲರಿಯಲ್ಲಿದ್ದರು. ಸಿಂಧು ಕಾದಾಡಿದ ಪರಿ ನೋಡಿ ನಿಬ್ಬೆರಗಾದ ಸೈನಾ ಸೀದಾ ಕೋಚ್ ಪುಲ್ಲೇಲ ಗೋಪಿಚಂದ್ ಬಳಿ ಸಾಗಿದರು.
‘ಈ ಮ್ಯಾಚ್ ನೋಡ್ತಾ ನೋಡ್ತಾ ನನ್ನಲ್ಲಿ ಪೆಟ್ರೋಲ್ ಖಾಲಿಯಾಯ್ತು’ ಎಂದು ತಮಾಷೆಯಾಗಿ ಸಿಂಧುಗೆ ಮೆಚ್ಚುಗೆ ಸಲ್ಲಿಸಿದರು. ಇದಕ್ಕೆ ನಗು ನಗುತ್ತಲೇ ಪ್ರತಿಕ್ರಿಯಿಸಿದ ಗೋಪಿಚಂದ್ ‘ಏನೇ ಆದರೂ ಈ ಮ್ಯಾಚ್ ಯಾವಾಗಲೋ ಒಮ್ಮೆ ಕೊನೆಯಾಗಲೇ ಬೇಕು. ಆಡುತ್ತಲೇ ಇರಲಾಗದು’ ಎಂದು ಈ ಸುದೀರ್ಘ ಆಟವನ್ನು ನೋಡಿ ಖುಷಿಪಟ್ಟರು.