Publish Date: Mon, 28 Aug 2017 (09:57 IST)
Updated Date: Mon, 28 Aug 2017 (09:59 IST)
ಪಲ್ಲಿಕೆಲೆ: ಟೀಂ ಇಂಡಿಯಾ ವಿರುದ್ಧ ತೃತೀಯ ಏಕದಿನ ಪಂದ್ಯವನ್ನು ಲಂಕಾ ತಂಡ ಸೋಲುತ್ತಿದೆ ಎಂದಾಗ ಅತಿಥೇಯ ತಂಡದ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದರು. ಆದರೆ ಬ್ಯಾಟ್ ಮಾಡುತ್ತಿದ್ದ ಧೋನಿ ಮಾತ್ರ ಕೂಲ್ ಆಗಿ ನಿದ್ರೆ ಮಾಡುತ್ತಿದ್ದರು!
ಧೋನಿ ಎಷ್ಟು ಶಾಂತ ಮೂರ್ತಿ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಯಿತು. ಇದೀಗ ಟ್ವಿಟರ್ ನಲ್ಲಿ ಭಾರೀ ವೈರಲ್ ಆಗಿದೆ.
ಲಂಕಾ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ಕೆಲವು ಕ್ಷಣಗಳ ಕಾಲ ಆಟ ಸ್ಥಗಿತಗೊಂಡಿತ್ತು. ಭದ್ರತಾ ಅಧಿಕಾರಿಗಳು ಅಭಿಮಾನಿಗಳನ್ನು ಸಮಾಧಾನಿಸುತ್ತಿದ್ದರು. ಇತರ ಆಟಗಾರರು, ಅಂಪಾಯರ್ ಗಳು ಚಿಂತೆಯಿಂದ ಪ್ರೇಕ್ಷಕರತ್ತ ನೋಡುತ್ತಿದ್ದರು.
ಆದರೆ ಕ್ರೀಸ್ ನಲ್ಲಿದ್ದ ಧೋನಿ ಮಾತ್ರ ಬ್ಯಾಟ್, ಹೆಲ್ಮೆಟ್, ಗ್ಲೌಸ್ ಎಲ್ಲಾ ಕಳಚಿಟ್ಟು ಪಿಚ್ ಪಕ್ಕದಲ್ಲೇ ಅಂಗಾತ ಮಲಗಿ ನಿದ್ರೆ ಮಾಡುತ್ತಿದ್ದರು! ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ, ಧೋನಿಯ ಈ ಪರಿಯನ್ನು ತಮಾಷೆ ಮಾಡುತ್ತಿದ್ದಾರೆ.
ಸಾಕ್ಷಿ (ಧೋನಿ ಪತ್ನಿ) 5 ನಿಮಿಷದಲ್ಲಿ ರೆಡಿ ಆಗಿ ಬರುತ್ತೇನೆ ಎಂದಿದ್ದರಂತೆ. ಅದಕ್ಕೇ ಧೋನಿ ಕಾಯುತ್ತಿದ್ದಾರೆ ಎಂದು ಒಬ್ಬರು ಕಾಲೆಳೆದಿದ್ದಾರೆ. ಇನ್ನು ಕೆಲವರು ನೋಡಿ, ನಮ್ಮ ಮಹಿ ಎಷ್ಟು ಡೌನ್ ಟು ಅರ್ತ್ ಎಂದು ಹೊಗಳಿದ್ದಾರೆ.