Select Your Language

Notifications

webdunia
webdunia
webdunia
webdunia

ಹಾರ್ದಿಕ್ ಪಾಂಡ್ಯ ಬಗ್ಗೆ ಟೀಂ ಇಂಡಿಯಾ ಆತಂಕ ದೂರ

ಹಾರ್ದಿಕ್ ಪಾಂಡ್ಯ ಬಗ್ಗೆ ಟೀಂ ಇಂಡಿಯಾ ಆತಂಕ ದೂರ
ಕೊಲೊಂಬೊ , ಭಾನುವಾರ, 27 ಆಗಸ್ಟ್ 2017 (12:10 IST)
ಕೊಲೊಂಬೊ: ಇಂದು ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಮೂರನೇ ಏಕದಿನ ಪಂದ್ಯವಾಡಲಿದೆ. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಬಗೆಗಿದ್ದ ಆತಂಕ ದೂರವಾಗಿದೆ.

 
ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಂದ್ಯದ ನಡುವೆ ಸ್ನಾಯು ಸೆಳೆತಕ್ಕೊಳಗಾಗಿದ್ದರು. ಹೀಗಾಗಿ ಅವರಿಗೆ ಓವರ್ ಪೂರ್ತಿಗೊಳಿಸಲು ಸಾಧ್ಯವಾಗಿರಲಿಲ್ಲ.

ಆದರೆ ಇಂದಿನ ಪಂದ್ಯಕ್ಕೆ ಪ್ರಮುಖ ಆಲ್ ರೌಂಡರ್ ಚೇತರಿಸಿಕೊಂಡಿರುವ ಸುದ್ದಿ ಟೀಂ ಇಂಡಿಯಾ ಮೂಲದಿಂದ ಬಂದಿದೆ. ಇದನ್ನು ಸ್ವತಃ ತಂಡದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಖಚಿತಪಡಿಸಿದ್ದಾರೆ.

ಭಾರತಕ್ಕೆ ಈಗ ಲಂಕಾದ ಸ್ಪಿನ್ನರ್ ಅಖಿಲಾ ಧನಂಜಯ್ ದ್ದೇ ಚಿಂತೆ.  ಕಳೆದ ಪಂದ್ಯದಲ್ಲಿ ಭಾರತವನ್ನು ಸೋಲಿನಂಚಿಗೆ ದೂಡಿದ್ದ ಧನಂಜಯ್ ಬೌಲಿಂಗ್ ಎದುರಿಸಲು ಭಾರತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಪಂದ್ಯವನ್ನು ಗೆದ್ದು ಸರಣಿ ಗೆಲ್ಲಬೇಕಾದರೆ ಈ ಸವಾಲು ಮೆಟ್ಟಿ ನಿಲ್ಲಲೇಬೇಕಿದೆ.

ಇದನ್ನೂ ಓದಿ.. ಇಸ್ರೇಲ್ ಪ್ರವಾಸಕ್ಕೆ ತೆರಳಿರುವ ಎಚ್ ಡಿ ಕುಮಾರಸ್ವಾಮಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ಬ್ಯಾಡ್ಮಿಂಟನ್: ಫೈನಲ್ ಪ್ರವೇಶಿಸಿದ ಪಿ.ವಿ.ಸಿಂಧು