Publish Date: Sat, 26 Aug 2017 (08:51 IST)
Updated Date: Sat, 26 Aug 2017 (08:58 IST)
ಪಲ್ಲಿಕೆಲೆ: ಕೋಚ್ ಆದರೂ ರವಿಶಾಸ್ತ್ರಿ ಭಾರತ ತಂಡದ ಗೆಲುವನ್ನು ಸ್ವಾರಸ್ಯಕರವಾಗಿ ಹೇಳುವುದನ್ನು ಮಾತ್ರ ಬಿಟ್ಟಿಲ್ಲ. ಅದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಸೋಲುತ್ತಿದ್ದ ಪಂದ್ಯವನ್ನು ಗೆಲ್ಲಿಸಿಕೊಟ್ಟ ಯುವ ಆಟಗಾರ ಭುವನೇಶ್ವರ ಕುಮಾರ್ ಬಗೆಗೆ ಅವರ ಅಭಿಮಾನ ಉಕ್ಕಿ ಹರಿದಿದೆ. ಅದನ್ನು ಅವರು ತಮ್ಮ ಟ್ವಿಟರ್ ನಲ್ಲಿ ವ್ಯಕ್ತಪಡಿಸಿದ್ದಾರೆ.
‘ಮಧ್ಯರಾತ್ರಿಗೆ ಅರ್ಧಗಂಟೆ ಮೊದಲು ಕ್ಯಾಂಡಿಯಲ್ಲಿ ಜೈಲ್ ಬ್ರೇಕ್ ನೋಡಿದೆ’ ಎಂದು ಕೋಚ್ ಶಾಸ್ತ್ರಿ ಖುಷಿಯಿಂದ ಟ್ವೀಟ್ ಮಾಡಿದ್ದಾರೆ. ಭುವಿ ಇನಿಂಗ್ಸ್ ನ್ನು ಈ ಮೂಲಕ ಜೈಲ್ ಬ್ರೇಕ್ ಗೆ ಹೋಲಿಸಿದ್ದಾರೆ.