Select Your Language

Notifications

webdunia
webdunia
webdunia
webdunia

ನಮ್ಮ ನೆಲದಲ್ಲಿ ತಾಕತ್ತು ತೋರಿಸಿ ನೋಡೋಣ: ಕೊಹ್ಲಿಗೇ ಸವಾಲ್!

ನಮ್ಮ ನೆಲದಲ್ಲಿ ತಾಕತ್ತು ತೋರಿಸಿ ನೋಡೋಣ: ಕೊಹ್ಲಿಗೇ ಸವಾಲ್!
ನವದೆಹಲಿ , ಮಂಗಳವಾರ, 29 ಆಗಸ್ಟ್ 2017 (08:42 IST)
ನವದೆಹಲಿ: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಎಲ್ಲಾ ತಂಡಗಳ ವಿರುದ್ಧ ಜಯದ ಮೇಲೆ ಜಯ ಸಾಧಿಸಿ ತೋರುತ್ತಿರಬಹುದು. ಆದರೆ ನಮ್ಮ ನೆಲದಲ್ಲಿ ಈ ತಾಕತ್ತು ತೋರಿಸಲಿ ನೋಡೋಣ ಎಂದು ದ. ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಸವಾಲು ಹಾಕಿದ್ದಾರೆ.

 
ಟೀಂ  ಇಂಡಿಯಾ ಈ ವರ್ಷದ ಅಂತ್ಯಕ್ಕೆ ಆಫ್ರಿಕಾ ಪ್ರವಾಸ ಮಾಡಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಆಕ್ರಮಣಕಾರಿ ಆಟಗಾರರ ನೈಜ ಸಾಮರ್ಥ್ಯ ಒರೆಗೆ ಹಚ್ಚಿದಂತಾಗುತ್ತದೆ ಎಂದು ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.

‘ದ. ಆಫ್ರಿಕಾದ ಹವಾಗುಣ ಭಾರತೀಯರಿಗೆ ಹೊಸದು. ಅದು ಲಂಕಾದಲ್ಲಿ ಅಥವಾ ಇನ್ನಾವುದೇ ಉಪಖಂಡದ ಪಿಚ್ ನಲ್ಲಿ ಆಡಿದಂತಲ್ಲ. ಇಲ್ಲಿ ಟೀಂ ಇಂಡಿಯಾಗೆ ನಿಜವಾದ ಅಗ್ನಿ ಪರೀಕ್ಷೆ ಕಾದಿದೆ’ ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ.. ಮತ್ತೊಂದು ತಮಿಳು ಸಿನಿಮಾ ಕನ್ನಡಕ್ಕೆ ಡಬ್?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆ ‘ವಿಶೇಷ ರಾತ್ರಿ’ ರೋಹಿತ್ ಶರ್ಮಾ ಜತೆಯಿದ್ದವರು ಯಾರು ಗೊತ್ತೇ?!