Publish Date: Wed, 30 Aug 2017 (08:17 IST)
Updated Date: Wed, 30 Aug 2017 (08:19 IST)
ನವದೆಹಲಿ: ಭಾರತ ತಂಡವನ್ನು ಹಲವು ಯಶಸ್ಸಿನೆಡೆಗೆ ಕೊಂಡೊಯ್ದ ಕ್ರಿಕೆಟಿಗ ಧೋನಿ ಭವಿಷ್ಯದ ಬಗ್ಗೆ ಮಾತನಾಡುತ್ತೀರಾ? ಅವರ ಬಗ್ಗೆ ಮಾತನಾಡುವ ಮೊದಲು ನಿಮ್ಮ ಸ್ಥಾನದ ಬಗ್ಗೆ ಮೊದಲು ಯೋಚಿಸಿ.
ಹೀಗಂತ ಆಯ್ಕೆಗಾರರ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಗೆ ಧೋನಿ ಮಾಜಿ ಕೋಚ್ ಕೇಶವ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಫಾರ್ಮ್ ನಲ್ಲಿಲ್ಲದಿದ್ದರೆ ಧೋನಿಗೂ ನಿರ್ಗಮನದ ಬಾಗಿಲು ತೋರಬೇಕಾಗುತ್ತದೆ ಎಂದಿದ್ದ ಪ್ರಸಾದ್ ರನ್ನು ಈಗ ಧೋನಿ ಅಭಿಮಾನಿಗಳೂ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧ ಕಳೆದ ಎರಡು ಪಂದ್ಯಗಳ ಗೆಲುವಿಗೆ ಕಾರಣರಾಗಿದ್ದ ಧೋನಿ ಇನಿಂಗ್ಸ್ ನೋಡಿದ ಮೇಲೆ ಅಭಿಮಾನಿಗಳ ಆಕ್ರೋಶ ಮೇರೆ ಮೀರಿದೆ.
ಧೋನಿಯ ಈ ಇನಿಂಗ್ಸ್ ನಿಮಗೆ ಕಪಾಳಮೋಕ್ಷ ಎಂದುಕೊಳ್ಳಿ, ಎಂದು ಅಭಿಮಾನಿಯೊಬ್ಬ ಹೇಳಿಕೊಂಡಿದ್ದರೆ, ಇನ್ನೊಬ್ಬರು, ಧೋನಿ ಮತ್ತು ಪ್ರಸಾದ್ ನಡುವೆ ಸಾಗರದಷ್ಟು ವ್ಯತ್ಯಾಸವಿದೆ. ಕೆಲವರು ಮಾತನಾಡುತ್ತಾರೆ. ಇನ್ನು ಕೆಲವರು ಮಾಡಿ ತೋರಿಸುತ್ತಾರೆ ಎಂದು ತಪರಾಕಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ